Advertisement

ಸತತ 5 ದಿನ ಕಾರ್ಯಾಚರಣೆ: ಹುಲಿ ಸುಳಿವಿಲ್ಲ

06:16 PM May 10, 2021 | Team Udayavani |

ಹುಣಸೂರು: ತಾಲೂಕಿನ ಹನಗೋಡು ಭಾಗದಲ್ಲಿಕಳೆದ ನಾಲ್ಕೈದು ದಿನಗಳಿಂದ ಹುಲಿ ಯಾರಿಗೂಕಾಣಿಸಿಕೊಂಡಿಲ್ಲ. ಬಹುಶ: ನಾಗರಹೊಳೆ ಉದ್ಯಾನಕ್ಕೆಮರಳಿರಬಹುದೆಂದು ಅರಣ್ಯಾಧಿ ಕಾರಿಗಳು ಶಂಕಿಸಿದ್ದಾರೆ.

Advertisement

ಐದು ಜಾನುವಾರುಗಳನ್ನು ಹತ್ಯೆ ಮಾಡಿರುವವ್ಯಾಘ್ರನ ಪತ್ತೆಗಾಗಿ ಅರಣ್ಯ ಇಲಾಖೆಯು ಪೊಲೀಸರಸಹಕಾರದೊಂದಿಗೆ ಐದು ದಿನಗಳಿಂದ ಸಾಕಾನೆಗಳಮೂಲಕ ಕಾರ್ಯಾಚರಣೆ ನಡೆಸುತ್ತಿದ್ದು, ಭಾನುವಾರಕೂಡ ಮುಂದುವರಿದಿದೆ.ಹುಲಿ ಅಡ್ಡಾಡಿರುವ ನಾಗರಹೊಳೆ ಉದ್ಯಾನದಂಚಿನನಾಗಪುರ ಪುನರ್ವಸತಿ ಕೇಂದ್ರದ ವುಡ್ಲಾಟ್‌ ಅರಣ್ಯಪ್ರದೇಶ, ಕಲ್ಲೂರಪ್ಪನ ಬೆಟ್ಟ ಸೇರಿದಂತೆ ಲಕ್ಷ್ಮಣ ತೀರ್ಥನದಿಯ ದಂಡೆ, ತೋಟ, ಜಮೀನು ಸೇರಿದಂತೆ ಎಲ್ಲೆಡೆ ಕೂಂಬಿಂಗ್‌ ನಡೆಸಿದರೂ ಹುಲಿಯ ಸುಳಿವು ಮಾತ್ರ ಪತ್ತೆಯಾಗಿಲ್ಲ.

ಹುಲಿಯು ಸತತ ನಾಲ್ಕು ಜಾನುವಾರುಗಳನ್ನು ಹತ್ಯೆಮಾಡಿದರೂ ಹೊಟ್ಟೆ ತುಂಬಿಸಿಕೊಳ್ಳಲುಸಾಧ್ಯವಾದ್ದರಿಂದ ಹಸಿವಿನಿಂದ ಕಂಗೆಟ್ಟು ಮತ್ತೆನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವನ್ಯಜೀವಿವಲಯಕ್ಕೆ ಮರಳಿರಬಹುದೆಂದು ಅಂದಾಜಿಸಲಾಗಿದೆ.ಆದರೂ ಜಂಟಿ ಕಾರ್ಯಾಚರಣೆ ಎಂದಿನಂತೆಮುಂದುವರಿಯಲಿದೆ ಎಂದು ಎಸಿಎಫ್‌ ಸತೀಶ್‌ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next