Advertisement

Canada based ಉಗ್ರ ಲಂಡಾನ 5 ಸಹಚರರ ಸೆರೆ

01:00 AM Jul 15, 2024 | Team Udayavani |

ಚಂಡೀಗಢ: ಕೆನಡಾ ಮೂಲದ ಉಗ್ರ ಲಖ್ಬೀರ್‌ ಸಿಂಗ್‌ ಅಲಿಯಾಸ್‌ ಲಂಡಾ ಎಂಬಾತನ ಐವರು ಸಹಚರರನ್ನು ಪಂಜಾಬ್‌ ಪೊಲೀಸರು ರವಿವಾರ‌ ಬಂಧಿಸಿದ್ದಾರೆ. ಈ ವೇಳೆ 3 ಪಿಸ್ತೂಲುಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪಂಜಾಬ್‌ ಪೊಲೀಸ್‌ ಮುಖ್ಯಸ್ಥ ಗೌರವ್‌ ಯಾದವ್‌ ಹೇಳಿದ್ದಾರೆ. ಇವರ ಬಂಧನದ ಬಳಿಕ ಲಂಡಾನ 13 ಮಂದಿ ಸಹಚರರನ್ನು ಬಂಧಿಸಿದಂತಾಗಿದೆ. ಈ ಗ್ಯಾಂಗ್‌ ಹಲವು ರೀತಿಯ ಘೋರ ಅಪರಾಧಗಳನ್ನು ನಡೆಸುತ್ತಿದ್ದರು. ಕೊಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಇವರು ಪೊಲೀಸರಿಗೆ ಬೇಕಾಗಿದ್ದರು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next