ಪಣಜಿಯಲ್ಲಿ ನಡೆದ ಮಾತನಾಡಿದ ಅವರು, “ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಅಗತ್ಯಗಳನ್ನು ಪೂರೈಸಲು ಇಂಧನ ವಲಯಕ್ಕೆ ಹರಿದುಬರುವ ಹೂಡಿಕೆಯ ಭಾಗ ಇದಾಗಿದೆ ಎಂದರು. “ವಿಶ್ವದಲ್ಲೇ ಭಾರತವು ಮೂರನೇ ಅತಿದೊಡ್ಡ ಇಂಧನ, ತೈಲ ಮತ್ತು ಎಲ್‌ಪಿಜಿ ಬಳಕೆದಾರ ರಾಷ್ಟ್ರವಾಗಿದೆ.ನಾಲ್ಕನೇ ಅತಿದೊಡ್ಡ ಎಲ್‌ಎನ್‌ಜಿ(ದ್ರವೀಕೃತ ನೈಸರ್ಗಿಕ ಅನಿಲ) ಆಮದುದಾರ ದೇಶವಾಗಿದೆ ಎಂದರು.
Advertisement
ಎಲ್‌ಎನ್‌ಜಿ ಖರೀದಿಗೆ ಕತಾರ್ ಜತೆಗೆ 6.47 ಲಕ್ಷ ಕೋಟಿ ರೂ.ಒಪ್ಪಂದಪ್ರಸ್ತುತ ಇರುವ ದರಕ್ಕಿಂತ ಕಡಿಮೆ ದರದಲ್ಲಿ 2048 ವರ್ಷದವರೆಗೆ ಕತಾರ್‌ನಿಂದ ಎಲ್‌ಎನ್‌ಜಿ ಆಮದನ್ನು ಮಾಡಿಕೊಳ್ಳಲು 6.47 ಲಕ್ಷ ಕೋಟಿ ರೂ.ಮೌಲ್ಯದ ಒಪ್ಪಂದವನ್ನು ಭಾರತ ಮಾಡಿಕೊಳ್ಳಲಿದೆ. ವಿದ್ಯುತ್ ಉತ್ಪಾದಿಸಲು, ರಸಗೊಬ್ಬರಗಳನ್ನು ತಯಾರಿಸಲು ಮತ್ತು ಸಿಎನ್‌ಜಿಗೆ ಪರಿವರ್ತಿಸಲು ವರ್ಷಕ್ಕೆ 7.5 ಮಿಲಿಯನ್ ಟನ್ ಅನಿಲವನ್ನು ಖರೀದಿಸುವ 2004ರ ಒಪ್ಪಂದವನ್ನು ವಿಸ್ತರಿಸಲು ಕತಾರ್ ಎನರ್ಜಿಯೊಂದಿಗೆ ಪೆಟ್ರೊನೆಟ್ ಎಲ್‌ಎನ್‌ಜಿ ಲಿ. ಒಪ್ಪಂದಕ್ಕೆ ಸಹಿ ಹಾಕಲಿದೆ.