Advertisement
ಅವರು ಒಟ್ಟು 6,84,837 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿನಯ್‌ಕುಲಕರ್ಣಿ(4,79,765 ಮತಗಳು) ಅವರನ್ನು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
Related Articles
ಕುಂದಗೋಳ-20 ಸಾವಿರ, ಶಿಗ್ಗಾವಿ-18 ಸಾವಿರ, ಹಾಗೂ ನವಲಗುಂದ-283 ಮತಗಳು ಬಿಜೆಪಿಗೆ ಮುನ್ನಡೆಯಾಗಿ ಸಿಕ್ಕವು. ಹು-ಧಾ ಪೂರ್ವ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ಗೆ 6296 ಮತಗಳ ಲೀಡ್ ಸಿಕ್ಕಿದ್ದು, ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿ ಬಹುದೊಡ್ಡ ಅಂತರದ ಗೆಲುವಿಗೆ ನಾಂದಿ ಬರೆಯಿತು.
Advertisement
ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದ, ಅಭಿವೃದಿಟಛಿ, ಸಜ್ಜನಿಕೆ ಮತ್ತು ಕ್ಷೇತ್ರದಲ್ಲಿ ನಾನು ಮಾಡಿದ ಕೆಲಸಕ್ಕೆ ಜಯ ಸಿಕ್ಕಿದೆ. ಸಮ್ಮಿಶ್ರ ಸರ್ಕಾರ ಅಪವಿತ್ರ ಎನ್ನುವುದನ್ನು ಮತದಾರರು ಮತ್ತೂಮ್ಮೆ ಸಾಬೀತು ಪಡಿಸಿದ್ದಾರೆ. ಇದು ಜಾತಿ ರಾಜಕಾರಣದ ಸೋಲು.– ಸಂಸದ ಪ್ರಹ್ಲಾದ ಜೋಶಿ ಮತದಾರರು ನೀಡಿದ ತೀರ್ಪನ್ನು ನಾನು ತಲೆಬಾಗಿ ಸ್ವೀಕರಿಸುತ್ತೇನೆ. ಇಲ್ಲಿ ಪ್ರಹ್ಲಾದ ಜೋಶಿ ಅವರು ಗೆದ್ದಿಲ್ಲ, ಬದಲಿಗೆ ಮೋದಿಯವರ ಅಲೆ ಅವರನ್ನು ಗೆಲ್ಲಿಸಿದೆ ಅಷ್ಟೆ. ನನ್ನ ಜನಸೇವೆ ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ಮುಂದುವರಿಯುತ್ತದೆ.
-ವಿನಯ್ ಕುಲಕರ್ಣಿ,
ಸೋತ ಅಭ್ಯರ್ಥಿ (ಕಾಂಗ್ರೆಸ್ ) ಗೆಲುವಿಗೆ 3 ಕಾರಣ
1.ಪ್ರಧಾನಿ ನರೇಂದ್ರ ಮೋದಿ ಅವರ ಸುನಾಮಿ ಅಲೆ ಜತೆಗೆ
ವ್ಯವಸ್ಥಿತ ಪ್ರಚಾರ ಅಬ್ಬರ
3.ಲಿಂಗಾಯತರು ಮತ್ತಷ್ಟು ಗಟ್ಟಿಯಾಗಿ ಬಿಜೆಪಿ ಬೆಂಬಲಕ್ಕೆ ನಿಲ್ಲು ವಂತೆ ಮಾಡಿದ ತಂತ್ರ ಜಾತಿಬೇಧ ಮರೆತು
2.ಯುವಕರು ಮೋದಿ ಹಾಗೂ ಬಿಜೆಪಿ ಬೆನ್ನಿಗೆ ನಿಂತಿದ್ದು ಸೋಲಿಗೆ 3 ಕಾರಣ
1. ಕೊನೆ ಕ್ಷಣದಲ್ಲಿ ಟಿಕೆಟ್ ನೀಡಿದ್ದರಿಂದ ಕೈ ಅಭ್ಯರ್ಥಿಗೆ
ಜನಮನ ತಲುಪಲು ಆಗಲಿಲ್ಲ
2.ಕಾಂಗ್ರೆಸ್ ಪಕ್ಷದಲ್ಲಿನ ಒಳಜಗಳ ಮತ್ತು ಗುಂಪುಗಾರಿಕೆ, ಪ್ರಚಾರಕ್ಕೆ ಕಡಿಮೆ ಅವಧಿ ಸಿಕ್ಕಿದ್ದು
3.ಪ್ರಚಾರಕ್ಕೆ ಗಾಂಧಿ ಕುಟುಂಬ ಮತ್ತು ಸ್ಟಾರ್ ಕ್ಯಾಂಪೇನರ್
ಗಳು ಬರಲೇ ಇಲ್ಲ