Advertisement

ವೆಲ್ಲಿಂಗ್ಟನ್ ಕದನಕ್ಕೆ ಸಜ್ಜಾದ ವಿರಾಟ್ ಪಡೆ: ವಿಲಿಯಮ್ಸನ್ ಇಲ್ಲದೆ ಆಡಲಿದೆ ಕಿವೀಸ್

09:40 AM Feb 01, 2020 | Team Udayavani |

ವೆಲ್ಲಿಂಗ್ಟನ್: ಭಾರತ- ನ್ಯೂಜಿಲ್ಯಾಂಡ್ ಟಿ20 ಸರಣಿಯ ನಾಲ್ಕನೇ ಪಂದ್ಯ ವೆಲ್ಲಿಂಗ್ಟನ್ ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಕಿವೀಸ್ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ಮಾಡಿದೆ.

Advertisement

ಸರಣಿಯ ಆರಂಭದ ಮೊದಲ ಮೂರು ಪಂದ್ಯಗಳನ್ನು ಗೆದ್ದಿರುವ ವಿರಾಟ್ ಪಡೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದೆ. ಅದೇ ರೀತಿ ಸರಣಿ ಸೋತರೂ ಮುಂದಿನೆರಡು ಪಂದ್ಯ ಗೆದ್ದು ಮಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.

ಆದರೆ ಕಿವೀಸ್ ಆಘಾತ ಎದುರಿಗಿದ್ದು, ನಾಯಕ ಕೇನ್ ವಿಲಿಯಮ್ಸನ್ ಭುಜ ನೋವಿಗೆ ಒಳಗಾಗಿ ಪಂದ್ಯಕ್ಕೆ ಲಭ್ಯರಾಗಿಲ್ಲ. ಇಂದು ಅವರ ಬದಲು ಟಿಮ್ ಸೌಥಿ ನಾಯಕತ್ವ ವಹಿಸಲಿದ್ದಾರೆ.

ಭಾರತದ ತಂಡದಲ್ಲಿ ಇಂದು ಮೂರು ಬದಲಾವಣೆ ಮಾಡಲಾಗಿದೆ. ಕಳೆದ ಪಂದ್ಯದ ಹೀರೋಗಳಾದ ರೋಹಿತ್ ಶರ್ಮಾ ಮತ್ತು ಮೊಹಮ್ಮದ್ ಶಮಿಗೆ ರೆಸ್ಟ್ ನೀಡಲಾಗಿದೆ. ಇದರೊಂದಿಗೆ ಆಲ್ ರೌಂಡರ್ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ.

ಇವರ ಬದಲಿಗೆ ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್ ಮತ್ತು ನವದೀಪ್ ಸೈನಿಗೆ ಅವಕಾಶ ನೀಡಲಾಗಿದೆ. ಸಂಜು ಸ್ಯಾಮ್ಸನ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ.

Advertisement

ಭಾರತ: ಸಂಜು ಸ್ಯಾಮ್ಸನ್ , ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ಶಾರ್ದೂಲ್ ಠಾಕೂರ್‌, ನವದೀಪ್‌ ಸೈನಿ, ಬುಮ್ರಾ, ಚಹಲ್‌.

ನ್ಯೂಜಿಲ್ಯಾಂಡ್‌: ಮಾರ್ಟಿನ್‌ ಗಪ್ಟಿಲ್‌, ಕಾಲಿನ್‌ ಮುನ್ರೊ, ರಾಸ್‌ ಟೇಲರ್‌, ಡ್ಯಾರಿಲ್‌ ಮಿಚೆಲ್‌, ಟಿಮ್‌ ಸೀಫ‌ರ್ಟ್‌, ಸ್ಕಾಟ್‌ ಕ್ಯುಗೆಲಿನ್‌, ಮಿಚೆಲ್‌ ಸ್ಯಾಂಟ್ನರ್‌, ಐಶ್‌ ಸೋಧಿ, ಹಾಮಿಶ್‌ ಬೆನೆಟ್‌, ಟಿಮ್‌ ಸೌಥಿ, ಟಾಮ್ ಬ್ರೂಸ್ .

Advertisement

Udayavani is now on Telegram. Click here to join our channel and stay updated with the latest news.

Next