Advertisement
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ 7 ವಿಕೆಟಿಗೆ 340 ರನ್ ಪೇರಿಸಿ ಯೂ ಇದನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಬಟ್ಲರ್ ಸಾರಥ್ಯದಲ್ಲಿ ಆಡಲಿದ ಇಂಗ್ಲೆಂಡ್ 49.3 ಓವರ್‌ಗಳಲ್ಲಿ 341 ರನ್ ಪೇರಿಸಿ ಸತತ 3ನೇ ಜಯಭೇರಿ ಮೊಳಗಿಸಿತು. ಸರಣಿಯ ಅಂತಿಮ ಪಂದ್ಯ ರವಿವಾರ ಲೀಡ್ಸ್‌ನಲ್ಲಿ ನಡೆಯಲಿದೆ.
ಚೇಸಿಂಗ್ ವೇಳೆ ಓಪನರ್ ಜಾಸನ್ ರಾಯ್ ಭರ್ಜರಿ 114 ರನ್ (89 ಎಸೆತ, 11 ಬೌಂಡರಿ, 4 ಸಿಕ್ಸರ್) ಸಿಡಿಸಿ ತಂಡಕ್ಕೆ ಆಧಾರವಾದರು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಸಂಭವಿಸಿದಾಗ ಬೆನ್ ಸ್ಟೋಕ್ಸ್ ನೆರವಿಗೆ ಬಂದರು. ಅವರ ಅಜೇಯ ಬೀಸುಗೆಯಲ್ಲಿ 71 ರನ್ ಹರಿದು ಬಂತು (64 ಎಸೆತ, 5 ಬೌಂಡರಿ, 3 ಸಿಕ್ಸರ್). ಮಗಳ ತೀವ್ರ ಅನಾರೋಗ್ಯದಿಂದಾಗಿ ಜಾಸನ್ ರಾಯ್ ಹಿಂದಿನ ರಾತ್ರಿಯಿಡೀ ಆಸ್ಪತ್ರೆಯಲ್ಲಿ ಕಳೆದಿದ್ದರು. ಗೆದ್ದ ಬಳಿಕ ಮತ್ತೆ ಆಸ್ಪತ್ರೆಗೆ ಧಾವಿಸಿದರು. ಹೀಗಾಗಿ ಇದೊಂದು “ಭಾವುಕ ಶತಕ’ ಎಂಬುದಾಗಿ ರಾಯ್ ಹೇಳಿದರು.
Related Articles
ಪಾಕಿಸ್ಥಾನದ ಬೃಹತ್ ಮೊತ್ತಕ್ಕೆ ಕಾರಣ ವಾದದ್ದು ಆರಂಭಕಾರ ಬಾಬರ್ ಆಜಂ ಅವರ ಶತಕ. 112 ಎಸೆತಗಳ ಆಟದ ವೇಳೆ ಅವರು 115 ರನ್ ಬಾರಿಸಿದರು (13 ಬೌಂಡರಿ, 1 ಸಿಕ್ಸರ್). ಫಕಾರ್ ಜಮಾನ್ 57, ಮೊಹಮ್ಮದ್ ಹಫೀಜ್ 59 ರನ್ ಹೊಡೆದರು.
Advertisement
ಸಂಕ್ಷಿಪ್ತ ಸ್ಕೋರ್ಪಾಕಿಸ್ಥಾನ-7 ವಿಕೆಟಿಗೆ 340 (ಬಾಬರ್ 115, ಹಫೀಜ್ 59, ಫಕಾರ್ 57, ಕರನ್ 75ಕ್ಕೆ 4). ಇಂಗ್ಲೆಂಡ್-49.3 ಓವರ್‌ಗಳಲ್ಲಿ 7 ವಿಕೆಟಿಗೆ 341 (ರಾಯ್ 114, ಸ್ಟೋಕ್ಸ್ ಔಟಾಗದೆ 71, ಇಮಾದ್ 62ಕ್ಕೆ 2).
ಪಂದ್ಯಶ್ರೇಷ್ಠ: ಜಾಸನ್ ರಾಯ್.