Advertisement
ಈ ಸಭೆಯಲ್ಲಿ 2021ರ ಸೆಪ್ಟೆಂಬರ್ ವರೆಗಿನ ತ್ರೈಮಾಸಿಕ ಪ್ರಗತಿ ಪರಿಶೀಲನೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಬ್ರಿಜ್ ಮೋಹನ್ ಶರ್ಮಾ, ಕೇಂದ್ರ ಸರ್ಕಾರ ಅತ್ಮ ನಿರ್ಭರ ಅಭಿಯಾನದಡಿ ಇಸಿಜಿಎಲ್‌ಎಸ್ 1.0 ರಿಂದ ಇಸಿಜಿಎಲ್‌ಎಸ್ 4.0, ಪಿಎಂ-ಸ್ವನಿಧಿ ಪ್ರಥಮ ಹಾಗೂ ಎರಡನೇ ಹಂತ, ಪಿಎಂಎಫ್‌ಎಂಇ, ಒಂದು ಜಿಲ್ಲೆ ಒಂದು ಉತ್ಪನ್ನ, ಕೃಷಿ ಮೂಲಸೌಕರ್ಯ ನಿಧಿ ಯೋಜನೆ, ಪಶುಸಂಗೋಪನೆ ಮೂಲಸೌಕರ್ಯ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
Related Articles
Advertisement
ಒಟುx ಆದ್ಯತಾ ವಲಯದ ಸಾಲಗಳಲ್ಲಿ ಕೃಷಿ ಶೇ. 40.96, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯ ಶೇ. 30.80 ಗುರಿ ಸಾಧಿಸಲಾಗಿದೆ. ಆಜಾದಿ ಕಾ ಅಮೃತ್ ಮಹೋತ್ಸವ ಅಡಿಯಲ್ಲಿ ಉಳಿತಾಯ ಮತ್ತು ಚಾಲ್ತಿ ಖಾತೆಗಳನ್ನು ಶೇ 100ರಷ್ಟು ಡಿಜಿಟಲ್ ಸೇವೆಗೆ ಸಾಧ್ಯವಾಗಿಸಿದ ರಾಯಚೂರು ಜಿಲ್ಲೆಯ ಎಲ್ಲಾ ಬ್ಯಾಂಕುಗಳಿಗೆ ಶರ್ಮಾ ಅಭಿನಂದನೆ ಸಲ್ಲಿಸಿದರು.
ಅಕ್ಟೋಬರ್ 13 ರಿಂದ ನಡೆದ ರಾಜ್ಯವ್ಯಾಪಿ ಸಾಲ ಅರಿವು ಕಾರ್ಯಕ್ರಮದಡಿ 27 ಜಿಲ್ಲೆಗಳಲ್ಲಿ ಎಲ್ಲಾ ಲೀಡ್ ಬ್ಯಾಂಕುಗಳ ಮೂಲಕ 5871.98 ಕೋಟಿ ರೂ. ಮೊತ್ತದ ವಿವಿಧ 1.54 ಲಕ್ಷ ಸಾಲಗಳನ್ನು ಮಂಜೂರು ಮಾಡಲಾಗಿದೆ ಎಂದು ಶರ್ಮಾ ತಿಳಿಸಿದರು. ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ನಿರ್ದೇಶಕ ಆರ್. ಗುರುಮೂರ್ತಿ, ನಬಾರ್ಡ್ ಚೀಫ್ ಜನರಲ್ ಮ್ಯಾನೇಜರ್ ನೀರಜ್ ಕುಮಾರ್ ವರ್ಮಾ ಸೇರಿದಂತೆ ವಿವಿಧ ಬ್ಯಾಂಕಿನ ಹಿರಿಯ ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.