Advertisement
ಇದರ ಅಂಗವಾಗಿ ವಾರ್ಷಿಕೋತ್ಸವದ ವಾರಾಂತ್ಯದಲ್ಲಿ ಸ್ಯಾಮ್‌ಸಂಗ್ ಒಪೆರಾ ಹೌಸ್ ಆಕರ್ಷಕ ಕೆ-ಫಿಯೆಸ್ಟಾ ಎಂಬ ಕೊರಿಯನ್ ಪಾಪ್ ಥೀಮ್ ಸಾಂಸ್ಕೃತಿಕ ಮತ್ತು ಸಂಗೀತ ಹಬ್ಬವನ್ನು ಹಮ್ಮಿಕೊಂಡಿತ್ತು. ಇದರಲ್ಲಿ ನೂರಾರು ಯುವ ಕೆ ಪಾಪ್ ಅಭಿಮಾನಿಗಳು ಬೆಂಗಳೂರಿನ ವಿವಿಧ ಶಾಲಾ ಕಾಲೇಜುಗಳಿಂದ ಭಾಗವಹಿಸಿದ್ದರು. ಸ್ಯಾಮ್‌ಸಂಗ್ ಸದಸ್ಯರೂ ಇದರಲ್ಲಿ ಜೊತೆಯಾಗಿ ಭಾರತೀಯ ಕೆ-ಪಾಪ್ ಬ್ಯಾಂಡ್ ಜೊತೆಗೆ ಕೆ-ಪಾಪ್ ಹಾಡುಗಳಿಗೆ ಹೆಜ್ಜೆ ಹಾಕಿದರು. ಕೆ-ಪಾಪ್ ಕಾನ್ಸರ್ಟ್ ಸ್ಕ್ರೀನಿಂಗ್‌ಗಳು, ಸಿನಿಮಾ ಸ್ಕ್ರೀನಿಂಗ್, ಡ್ಯಾನ್ಸ್ ಕಾರ್ಯಕ್ರಮಗಳು, ಕಾಸ್‌ಪ್ಲೇ ಸ್ಫರ್ಧೆ ಮತ್ತು ಆಕರ್ಷಕ ಕೊರಿಯನ್ ತಿನಿಸು ಕಾರ್ಯಾಗಾರ ನಡೆಯಿತು.
Related Articles
Advertisement
ಕಳೆದ ನಾಲ್ಕು ವರ್ಷಗಳಲ್ಲಿ ಸ್ಯಾಮ್‌ಸಂಗ್ ಒಪೆರಾ ಹೌಸ್ 600 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿದೆ. ಇದರಲ್ಲಿ ಉತ್ಪನ್ನ ಬಿಡುಗಡೆಗಳು, ಲೈವ್ ಮ್ಯೂಸಿಕ್, ಒಟಿಟಿ ಸಿನಿಮಾ ಪ್ರೀಮಿಯರ್. ಸ್ಯಾಮ್‌ಸಂಗ್‌ನ ಸಿಎಸ್‌ಆರ್ ಇನಿಶಿಯೇಟಿವ್ ಆಗಿರುವ ಸಾಲ್ವ್ ಫಾರ್ ಟುಮಾರೋದಲ್ಲಿ ಯುವಕರಿಗೆ ಶಿಕ್ಷಣ ಮತ್ತು ಅನ್ವೇಷಣೆ ಸ್ಫರ್ಧೆಗಳಿರುತ್ತವೆ.
ಸ್ಯಾಮ್‌ಸಂಗ್ ಒಪೆರಾ ಹೌಸ್ 1900 ನೇ ಇಸವಿಯ ವಿನ್ಯಾಸದ ನೋಟ ಹೊಂದಿದೆ. ಒಳಭಾಗದಲ್ಲಿ ಇದು ಆಧುನಿಕ ಲುಕ್ ನೀಡುತ್ತದೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿದೆ. ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಮತ್ತು ವೇರಬಲ್ ಸಾಧನಗಳ ಜೊತೆಗೆ ಫ್ಲಾಗ್‌ಶಿಪ್ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಇದು ಪ್ರದರ್ಶಿಸುತ್ತದೆ. ಇದು ಸಂಪೂರ್ಣ ಕಾರ್ಯನಿರ್ವಹಣೆಯ ಗ್ರಾಹಕ ಸೇವಾ ಕೇಂದ್ರವನ್ನೂ ಹೊಂದಿದೆ.