ಮುಂಬಯಿ, ಜು. 2: ಮಹಾರಾಷ್ಟ್ರದಲ್ಲಿ ಈವರೆಗೆ 4,938 ಮಂದಿ ಪೊಲೀಸ್ ಸಿಬಂದಿಗಳಲ್ಲಿ ಕೋವಿಡ್ ಸೋಂಕು ದೃಡವಾಗಿದ್ದು, 60 ಮಂದಿ ಬಲಿಯಾಗಿದ್ದಾರೆ ಎಂದು ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಹೇಳಿದ್ದಾರೆ.
ಮೃತ 60 ಮಂದಿಯಲ್ಲಿ 38 ಮಂದಿ ಮುಂಬಯಿ ಪೊಲೀಸ್ ಪಡೆಯವರಾ ಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. 4,938 ಸೋಂಕಿತ ಸಿಬಂದಿಗಳ ಪೈಕಿ 3,813 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, 1,000ಕ್ಕೂ ಅಧಿಕ ಪೊಲೀಸರು ಪ್ರಸ್ತುತ ಚಿಕಿತ್ಸೆಯಲ್ಲಿದ್ದಾರೆ ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ. 1,39,702 ಅಪರಾಧ ಪ್ರಕರಣ ದಾಖಲು ಲಾಕ್‌ಡೌನ್ ಜಾರಿಯಾದಾಗಿನಿಂದ ಈವರೆಗೆ 1,39,702 ಅಪರಾಧಗಳನ್ನು ದಾಖಲಿಸಲಾಗಿದೆ ಎಂದು ಅನಿಲ್ ದೇಶ್ಮುಖ್ ಅವರು ತಿಳಿಸಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ಸೇವೆಗಳಿಗಾಗಿ ಪೊಲೀಸ್ ಇಲಾಖೆ ಈವರೆಗೆ 5,36,324 ಪಾಸ್ ನೀಡಿದೆ. ಪೋಲಿಸ್ ಸಹಾಯವಾಣಿ ಸಂಖ್ಯೆ 100ಕ್ಕೆ ಕೋವಿಡ್ ಸಂಬಂಧಿಸಿದ 1,05,269 ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಟ್ಟಾರೆಯಾಗಿ ರಾಜ್ಯದಲ್ಲಿ 6,16,899 ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಅವರಲ್ಲಿ 756 ಜನರು ಕ್ವಾರಂಟೈನ್ ಮಾನದಂಡಗಳನ್ನು ಉಲ್ಲಂಘಿಸಿರುವುದು ತಿಳಿದುಬಂದಿದೆ. ರಾಜ್ಯ ಸರಕಾರವು ಪ್ರಸ್ತುತ 10 ಪರಿಹಾರ ಶಿಬಿರಗಳನ್ನು ನಡೆಸುತ್ತಿದ್ದು, ಅಲ್ಲಿ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ಇತರ ಅಗತ್ಯತೆ ಗಳೊಂದಿಗೆ ಆಶ್ರಯವನ್ನು ನೀಡಲಾಗುತ್ತಿದೆ ಎಂದು ದೇಶ್ಮುಖ್ ಹೇಳಿದ್ದಾರೆ. ಅಕ್ರಮ ಸಾಗಣೆಗೆ ಒಟ್ಟು 1,335 ಅಪರಾಧಗಳನ್ನು ದಾಖಲಿಸಲಾಗಿದೆ.
85 ಸಾವಿರ ವಾಹನ ಜಪ್ತಿ : ಲಾಕ್‌ಡೌನ್ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಒಟ್ಟು 29,298 ಮಂದಿಯನ್ನು ಬಂಧಿಸಲಾಗಿದ್ದು, 85,780 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಈವರೆಗೆ ಪೊಲೀಸರ ಮೇಲೆ ಹಲ್ಲೆಯ 290 ಪ್ರಕರಣಗಳು ವರದಿಯಾಗಿದ್ದು, ಅವುಗಳಿಗೆ ಸಂಬಂಧಿಸಿದಂತೆ 860 ಮಂದಿಯನ್ನು ಬಂಧಿಸಲಾಗಿದೆ. ನಿಯಮಗಳನ್ನು ಉಲ್ಲಂ ಸಿದವರಿಂದ ದಂಡವಾಗಿ 9,52,52,661 ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಗƒಹ ಸಚಿವರು ತಿಳಿಸಿದ್ದಾರೆ.