Advertisement

Scheduled Castes ರಾಷ್ಟ್ರೀಯ ಆಯೋಗಕ್ಕೆ 4 ವರ್ಷದಲ್ಲಿ 47,000 ದೂರು ಸಲ್ಲಿಕೆ!

01:26 AM Oct 14, 2024 | Team Udayavani |

ಹೊಸದಿಲ್ಲಿ: ಪರಿಶಿಷ್ಟ ಜಾತಿ ರಾಷ್ಟ್ರೀಯ ಆಯೋಗಕ್ಕೆ ಕಳೆದ 4 ವರ್ಷದಲ್ಲಿ 47,000ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, ಅವುಗಳಲ್ಲಿ ದಲಿತ ದೌರ್ಜನ್ಯ, ಭೂ ವಿವಾದ ಮತ್ತು ಸರಕಾರಿ ನೌಕರಿಗೆ ಸಂಬಂಧಪಟ್ಟಿದ್ದಾ­ಗಿವೆ. ಸುದ್ದಿಸಂಸ್ಥೆ ಆರ್‌ಟಿಐ ಮೂಲಕ ಕೇಳಿದ ಮಾಹಿತಿಗೆ ಆಯೋಗ ನೀಡಿದ ಉತ್ತರದಲ್ಲಿ ಈ ವಿವರ ನೀಡಲಾಗಿದೆ. 2020-21ರಲ್ಲಿ 11,917, 2021-22 ರಲ್ಲಿ 13,864, 2022-23ರಲ್ಲಿ 12402 ಮತ್ತು ಪ್ರಸಕ್ತ ವರ್ಷದಲ್ಲಿ 9,950 ಪ್ರಕರಣಗಳ ಸಂಬಂಧ ದೂರುಗಳನ್ನು ಸ್ವೀಕರಿಸಲಾಗಿದೆ. ಆಯೋಗದ ಅಧ್ಯಕ್ಷ ಕಿಶೋರ್‌ ಮಕ್ವಾನ್‌ ಮಾತನಾಡಿ, ಮುಂದಿನ ತಿಂಗಳಿ­ನಿಂದ ಈ ದೂರುಗಳ ವಿಲೇವಾರಿ ಮಾಡಲಾಗುತ್ತದೆ. ನಾನು ಮತ್ತು ಆಯೋಗದ ಸದಸ್ಯರು ದೂರುದಾರರ ಸಮಸ್ಯೆಗಳ ಇತ್ಯರ್ಥಕ್ಕೆ ಶ್ರಮಿಸಲಿದ್ದೇವೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next