Advertisement

ಬರೋಬ್ಬರಿ 47 ಸಾವಿರ ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿ ವಂಚನೆ

07:38 PM Mar 30, 2022 | Team Udayavani |

ನವದೆಹಲಿ: ಆ್ಯಕ್ಸಿ ಇನ್‌ಫಿನಿಟಿ ಹೆಸರಿನ ಎನ್‌ಎಫ್ ಟಿ ಗೇಮಿಂಗ್‌ ಸಾಫ್ಟ್ ವೇರ್‌ನಲ್ಲಿ ಹ್ಯಾಕರ್‌ಗಳು ರೋನಿನ್‌ ಹೆಸರಿನ ಬ್ಲಾಕ್‌ಚೈನ್‌ ಬಳಸಿ ಬರೋಬ್ಬರಿ 47 ಸಾವಿರ ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿಯನ್ನು ವಂಚಿಸಿದ್ದಾರೆ.

Advertisement

ಆ್ಯಕ್ಸಿ ಇನ್‌ಫಿನಿಟಿ ಎನ್ನುವುದು ಆಟವಾಡಿ ಹಣ ಗೆಲ್ಲುವ ಆಟವಾಗಿದೆ. ಅದರಲ್ಲಿ ಜನರು ಮೊದಲೇ ಹಣ ಹಾಕಿ ಆಡಬೇಕು. ಗೆದ್ದ ಹಣವನ್ನು ಕ್ರಿಪ್ಟೋ ರೂಪದಲ್ಲಿ ನೀಡಲಾಗುತ್ತದೆ. ಅದರಲ್ಲಿ ರೋನಿನ್‌ನಿಂದ ಹಣ ವರ್ಗಾವಣೆ ಮತ್ತು ರೋನಿನ್‌ಗೆ ಹಣ ವರ್ಗಾವಣೆ ಮಾಡುವ ಕೋಡಿಂಗ್‌ನ್ನು ಹ್ಯಾಕರ್‌ಗಳು ಹ್ಯಾಕ್‌ ಮಾಡಿದ್ದಾರೆ. 1,73,600 ಎಥೆರಂ ಅನ್ನು ಹ್ಯಾಕ್‌ ಮಾಡಿರುವುದಾಗಿ ಹೇಳಲಾಗಿದೆ.

ಇದನ್ನೂ ಓದಿ:ಅಪ್ಪಾಜಿ ಅಪ್ಪಾಜಿ ಅಂದ್ಕೋತಾ ಅಡ್ಡಾಡಬೇಕು: ಯತ್ನಾಳ್ ಟೀಕಾಸ್ತ್ರಕ್ಕೆ ಯಾರು ಗುರಿ?

ಆ್ಯಕ್ಸಿ ಇನ್‌ಫಿನಿಟಿಯ ಮಾಲೀಕತ್ವವನ್ನು ವಿಯೆಟ್ನಾಂ ಮೂಲದ ಸ್ಕೈಮಾವಿಸ್‌ ಸಂಸ್ಥೆ ಹೊಂದಿದ್ದು, ಅದು ಈಗ ರೋನಿನ್‌ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next