Advertisement

47.8 degrees; ಉತ್ತರ ಭಾರತದ ಹಲವೆಡೆ ಶಾಖದ ಅಲೆ ಅಲರ್ಟ್‌!

01:28 AM May 20, 2024 | Team Udayavani |

ಹೊಸದಿಲ್ಲಿ: ದಿಲ್ಲಿ, ಪಂಜಾಬ್‌ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಿಗೆ ರವಿವಾರದಿಂದ ಮುಂದಿನ 5 ದಿನಗಳ ವರೆಗೆ ಬಿಸಿ ಗಾಳಿ ಬೀಸಲಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ರೆರ್ಡ್‌ ಅಲರ್ಟ್‌ ನೀಡಿದೆ. ಹೊಸದಿಲ್ಲಿಯ ನಜಾಫ್ಗಢದಲ್ಲಿ ರವಿವಾರ 47.8 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ಹಾಲಿ ಬೇಸಗೆ ಯಲ್ಲಿ ದಾಖಲಾಗಿರುವ ಗರಿಷ್ಠ ತಾಪ ಮಾನವಾಗಿದೆ.

Advertisement

ಪೀತಂಪುರ ದಲ್ಲಿ 47 ಡಿ.ಸೆ, ಮುಂಗೇಶ್‌ಪುರ 47.7 ಡಿ.ಸೆ. ತಾಪಮಾನ ದಾಖಲಾಗಿದೆ. ರಾಜಸ್ಥಾನದ ಗಂಗಾ ನಗರ ದಲ್ಲಿ 47.5 ಡಿ.ಸೆ, ಮಧ್ಯ ಪ್ರದೇ ಶದ ದಾಟಿಯಾದಲ್ಲಿ 47 ಡಿ.ಸೆ, ಹರಿಯಾಣದ ನೂಹ್‌ನಲ್ಲಿ 47.2 ಡಿ.ಸೆ, ಉತ್ತರ ಪ್ರದೇಶದ ಝಾನ್ಸಿಯಲ್ಲಿ 47.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ಹಿಮಾಚಲ ಪ್ರದೇಶದ ಗಿರಿಧಾಮಗಳಲ್ಲಿಯೂ ಕೂಡ ಬಿಸಿಗಾಳಿ ಬೀಸಲಿದೆ ಎಂದು ಐಎಂಡಿ ಹೇಳಿದೆ. ಇದೇ ವೇಳೆ ಗುಜರಾತ್‌ನ ವಿವಿಧ ಭಾಗಗಳಲ್ಲಿಯೂ ಕೂಡ ಬಿಸಿ ಗಾಳಿಯ ಅನುಭವ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದಲ್ಲದೆ ಹರಿಯಾಣ, ಚಂಡೀಗಢ, ದಿಲ್ಲಿ, ಉತ್ತರಪ್ರದೇಶ, ಬಿಹಾರಗಳಲ್ಲಿಯೂ ರವಿವಾರ ಬಿಸಿ ಗಾಳಿಯ ಅನುಭವ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next