ನೋಡೆಲ್ ಅಧಿಕಾರಿ ಮಂಗಳೂರು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
Advertisement
ದ್ವಿತೀಯ ಹಂತದ ನರೇಗಾ ಯೋಜನೆ ಯಲ್ಲಿ 11,29,236 ರೂಪಾಯಿ ಮೊತ್ತದ 46 ಕಾಮಗಾರಿಗಳು ನಡೆದಿವೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಯೋಜನೆಯ ತಾಲೂಕು ಸಂಯೋಜಕಿ ಧನಲಕ್ಷ್ಮೀ ಅವರು ಮಾತನಾಡಿ,ನರೇಗಾ ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಬಡವರ ಉದ್ಧಾ ರದ ಉದ್ದೇಶ ಈ ಯೋಜನೆದಾಗಿದೆ. ಗ್ರಾಮ ಗಳಲ್ಲಿ ಸಮಸ್ಯೆ ಕಡಿಮೆಯಾಗಿ ಜನರು ಸ್ವಾವ ಲಂಬನೆ ಬದುಕು ಹೊಂದ ಬೇಕು ಎಂದರು.
Related Articles
Advertisement
ಅದ್ಯಪಾಡಿ ಸಂಜೀವಿನಿ ಶೆಡ್ಡೆ ಕಾಮ ಗಾರಿ ಪ್ರಗತಿಯಲ್ಲಿದ್ದು ತಾಂತ್ರಿಕ ಅಳತೆ ಪ್ರಕಾರ 1,09,560 ರೂಪಾಯಿ ಪಾವತಿಯಾಗ ಬೇಕಿತ್ತು. ಅದರೆ 1,44,781 ರೂಪಾಯಿ ಪಾವತಿ ಯಾಗಿದೆ. ಹೆಚ್ಚುವರಿ 35,221 ರೂ. ಪಾವತಿಯಾಗಿದೆ ಎಂದು ಇದನ್ನು ವಸೂಲಾತಿಗೆ ಬರೆಯಬೇಕೆ ಎಂದು ಸಭೆ ಹೇಳಲಾಯಿತು. ಸಂಜೀವಿನಿ ಶೆಡ್ಡೆ ಕಾಮ ಗಾರಿ ಪ್ರಗತಿಯಲ್ಲಿರುವುದರಿಂದ ಅದನ್ನು ಅಪೇಕ್ಷಣೆಯಲ್ಲಿಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಂದಾವರ ಗ್ರಾ. ಪಂ. ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ, ಉಪಾಧ್ಯಕ್ಷ ದೇವೇಂದ್ರ, ಯೋಜನೆಯ ಎಂಜಿನಿಯರ್ ಮಮತಾ ಉಪಸ್ಥಿತರಿದ್ದರು.ಪಿಡಿಒ ರೋಹಿಣಿ ಸ್ವಾಗತಿಸಿ, ಯೋಜನೆಯ ಸಂಪನ್ಮೂಲ ವ್ಯಕ್ತಿ ರೇಖಾಮಣಿ ನಿರ್ವಹಿಸಿದರು.