ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ 46 ಕೋವಿಡ್ 19 ಪ್ರಕರಣಗಳು ದೃಢಪಟ್ಟಿವೆ.
ಇದೇ ಸಂದರ್ಭದಲ್ಲಿ ಈ ಸೋಂಕಿನಿಂದ ಒಟ್ಟು 49 ಮಂದಿ ಗುಣಮುಖರಾಗಿದ್ದಾರೆ. 515 ಸಕ್ರಿಯ ಪ್ರಕರಣಗಳಿವೆ.
ಚಾಮರಾಜನಗರ ಹಾಗೂ ಕೊಳ್ಳೇಗಾಲ ತಾಲೂಕಿನಲ್ಲಿ ತಲಾ 14, ಗುಂಡ್ಲುಪೇಟೆ ತಾಲೂಕಿನಿಂದ 13, ಯಳಂದೂರು ಹಾಗೂ ಹನೂರು ತಾಲೂಕಿನಿಂದ ತಲಾ 2 ಹಾಗೂ ಹೊರ ಜಿಲ್ಲೆಯ 01 ಪ್ರಕರಣಗಳು ವರದಿಯಾಗಿವೆ.
ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 2771 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 2200 ಮಂದಿ ಗುಣಮುಖರಾಗಿದ್ದಾರೆ. 57 ಮಂದಿ ಮೃತಪಟ್ಟಿದ್ದಾರೆ. 30 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 162 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.
ಬುಧವಾರ ಒಟ್ಟು 1006 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. 961 ಮಾದರಿಗಳಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ.
ಇಂದಿನ ಪ್ರಕರಣಗಳು-46
ಇಂದು ಗುಣಮುಖ-49
ಒಟ್ಟು ಗುಣಮುಖ-2200
ಇಂದಿನ ಸಾವು-00
ಒಟ್ಟು ಸಾವು-57
ಸಕ್ರಿಯ ಪ್ರಕರಣಗಳು-515
ಒಟ್ಟು ಸೋಂಕಿತರು-2771