Advertisement

Dhruvastra: 45,000 ಕೋಟಿ ರೂ. ಶಸ್ತ್ರಾಸ್ತ್ರ ಖರೀದಿಗೆ ಅಸ್ತು

11:53 PM Sep 15, 2023 | Team Udayavani |

ಹೊಸದಿಲ್ಲಿ: ಧ್ರುವಾಸ್ತ್ರ ಕ್ಷಿಪಣಿ, 12 ಎಸ್‌ಯು-30 ಎಂಕೆಐ ಯುದ್ಧ ವಿಮಾನ ಸೇರಿ­ದಂತೆ ವಿವಿಧ ಶಸ್ತ್ರಾಸ್ತ್ರ ವ್ಯವಸ್ಥೆಗಳು ಸದ್ಯದಲ್ಲೇ ಭಾರತೀಯ ಸೇನೆಯ ಕೈಸೇರಲಿವೆ.

Advertisement

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಶುಕ್ರವಾರ ಒಟ್ಟು 45,000 ಕೋಟಿ ರೂ. ಮೊತ್ತದ ರಕ್ಷಣಾ ಸಾಧನ­ಗಳನ್ನು ಖರೀದಿಸಲು ಅನುಮತಿ ನೀಡಿಗೆ. ಈ ಬಗ್ಗೆ ಸಚಿವಾಲಯ ಅಧಿಕೃತ ಆದೇಶವನ್ನು ಹೊರಡಿಸಿದೆ.

ಲಘುವ್ಯಾಪ್ತಿಯ ಆಕಾಶದಿಂದ ಭೂಮಿಗೆ ಅಪ್ಪಳಿಸುವ ಧ್ರುವಾಸ್ತ್ರ ಕ್ಷಿಪಣಿ­ಗಳು, 12 ಎಸ್‌ಯು-30 ಎಂಕೆಐ ಯುದ್ಧ­ವಿಮಾನಗಳು, ಹೈ ಮೊಬಿಲಿಟಿ ವಾಹನ­ಗಳು, ಗನ್‌ ಅಳವಡಿಸಲಾಗಿರುವ ವಾಹನ­ಗಳು, ಮುಂದಿನ ತಲೆಮಾರಿನ ನಿಗಾ ನೌಕೆ­ಗಳ ಖರೀದಿ ಸೇರಿದಂತೆ ಒಟ್ಟು 9 ಬೇಡಿಕೆಗಳಿಗೆ ಡಿಎಸಿ ಒಪ್ಪಿಗೆ ನೀಡಿದೆ. ಇವೆಲ್ಲ­ವನ್ನೂ ಭಾರತೀಯ ಕಂಪೆನಿ­ಗಳಿಂದಲೇ ಖರೀದಿಸಲಾಗುತ್ತದೆ. ಬೈ ಯೋಜನೆಯಡಿ ಭಾರತೀಯ ಕಂಪೆನಿಗ­ಳಿಂದಲೇ ಖರೀದಿಸುವುದರಿಂದ ಆತ್ಮ­ನಿರ್ಭರ ಭಾರತದ ಗುರಿ ಮುಟ್ಟಲು ಸಹಾಯಕ­ವಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ರಕ್ಷಣಾ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸಲು, ದಾಳಿ ಸಾಮರ್ಥ್ಯ, ಯಾಂತ್ರೀಕೃತ ಪಡೆಗಳನ್ನು ಸದೃಢಗೊಳಿಸಲು ಡಿಎಸಿ ಈ ತೀರ್ಮಾನ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next