Advertisement

4,500 ಮಂದಿ ಸೋಂಕಿತರು ನಾಪತ್ತೆ!

02:39 AM Jul 24, 2020 | Hari Prasad |

ಬೆಂಗಳೂರು: ನಗರದಲ್ಲಿ ಕೋವಿಡ್ 19 ಸೋಂಕು ಪರೀಕ್ಷೆ ಮಾಡಿಸಿಕೊಳ್ಳುತ್ತಿರುವವರು ಸುಳ್ಳು ವಿಳಾಸ ಮತ್ತು ಅಸ್ತಿತ್ವದಲ್ಲಿ ಇಲ್ಲದ ಮೊಬೈಲ್‌ ಸಂಖ್ಯೆ ನೀಡುತ್ತಿದ್ದು, ಅಧಿಕಾರಿಗಳಿಗೆ ಹೊಸ ತಲೆನೋವು ಶುರುವಾಗಿದೆ.

Advertisement

ಈ ರೀತಿ ತಪ್ಪು ಮಾಹಿತಿ ನೀಡಿ ಸುಮಾರು 4,500 ಮಂದಿ ತಲೆಮರೆಸಿ ಕೊಂಡಿದ್ದಾರೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ನಗರದಲ್ಲಿ ನಿತ್ಯ ಎರಡು ಸಾವಿರ ಜನರಿಗೆ ಸೋಂಕು ದೃಢಪಡುತ್ತಿದೆ.

ಇವರ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡುವುದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಸೋಂಕಿತರು ನಾಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಸೋಂಕಿತರ ಪತ್ತೆಗೆ ಡಿಸಿಪಿ ತಂಡ
ತಪ್ಪು ವಿಳಾಸ ಹಾಗೂ ಮೊಬೈಲ್‌ ನಂಬರ್‌ ನೀಡಿರುವ ಸೋಂಕಿತರನ್ನು ಪತ್ತೆ ಮಾಡಲು ವಲಯಕ್ಕೊಬ್ಬರಂತೆ ಡಿಸಿಪಿ ನೇತೃತ್ವದ ತಂಡ ರಚಿಸಲಾಗಿದೆ.

Advertisement

ಸೋಂಕಿತರು ನೀಡಿರುವ ಮೊಬೈಲ್‌ ನಂಬರನ್ನು ಈ ತಂಡಕ್ಕೆ ಒಪ್ಪಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next