Advertisement

450 ಮೀ. ಉದ್ದದ ಕನ್ನಡ ಧ್ವಜ ಮೆರವಣಿಗೆ

12:32 PM Nov 02, 2019 | Team Udayavani |

ಶಿರಸಿ: ಕನ್ನಡ ರಾಜ್ಯೋತ್ಸವವನ್ನು ನಗರದಲ್ಲಿ ಕನ್ನಡಾಂಬೆ, ವಿವಿಧ ಮಕ್ಕಳ ಸ್ಥಬ್ಧ ಚಿತ್ರಗಳು, 450 ಮೀಟರ್‌ ಉದ್ದದ ಕನ್ನಡ ಧ್ವಜದ ಮೆರವಣಿಗೆ, ಕನ್ನಡದ ಜಾಗೃತಿ ಘೋಷಣೆಗಳ ಮೂಲಕ ಆಚರಿಸಲಾಯಿತು.

Advertisement

ಮೆರವಣಿಗೆಗೆ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ಚಾಲನೆ ನೀಡಿದರು. 15 ಸೇವಾದಳ ತಂಡ, 10 ಸ್ಕೌಟ್ಸ್‌ ಮತ್ತು ಗೈಡ್ಸ್‌ ತಂಡ ಪಾಲ್ಗೊಂಡಿದ್ದವು. ರೆಡ್‌ ಆಂಟ್‌ ಸಂಘಟನೆ ಕನ್ನಡ ಧ್ವಜ ಎಲ್ಲರ ಗಮನ ಸೆಳೆಯಿತು.

ನಂತರ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮಕ್ಕೆ ಸಹಾಯಕ ಆಯುಕ್ತ ಡಾ ಈಶ್ವರ ಚಾಲನೆ ನೀಡಿ, ಆಲೂರ ವೆಂಕಟರಾವ್‌ 1905 ರಲ್ಲಿ ಕಂಡ ಕರ್ನಾಟಕ ಏಕೀಕರಣದ ಕನಸು 1956 ರಲ್ಲಿ ನನಸಾಯಿತು. 1973 ರಲ್ಲಿ ಕರ್ನಾಟಕ ಎಂದು ನಾಮಕರಣಗೊಂಡಿತು. ಕನ್ನಡದ ನೆಲೆಯನ್ನು ದೃಢಪಡಿಸಬೇಕು. ಕನ್ನಡ ಶಾಲೆಯಲ್ಲಿ ಓದಿದವರೇ ಅತ್ಯುನ್ನತ ಹುದ್ದೆಯಲ್ಲಿದ್ದಾರೆ. ಕನ್ನಡ ಶಾಲೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕು ಎಂದರು. ಜಿಪಂ ಸದಸ್ಯರಾದ ಬಸವರಾಜ ದೊಡ್ಮನಿ, ಉಷಾ ಹೆಗಡೆ ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಮಾತೃಭಾಷೆಗೆ ಮಹತ್ವ ನೀಡಬೇಕು ಎಂದು ಆಶಿಸಿದರು.

ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯೆ ವೀಣಾ ಶೆಟ್ಟಿ, ಕಸಾಪ ಮಹಾದೇವ ಚಲವಾದಿ, ಬಿಇಒ ಸದಾನಂದ ಸ್ವಾಮಿ, ಜಿಪಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ ಗಾಂವಕರ್‌, ತಾಪಂ ಇಒ ಎಫ್‌.ಜಿ.ಚಿನ್ನಣ್ಣನವರ್‌ ಉಪಸ್ಥಿತರಿದ್ದರು. ತಹಶೀಲ್ದಾರ ಎಂ.ಆರ್‌. ಕುಲಕರ್ಣಿ ಸ್ವಾಗತಿಸಿದರು. ವಸಂತ ಭಂಡಾರಿ ನಿರ್ವಹಿಸಿದರು. ರೂಪಕಗಳಲ್ಲಿ ಪಾಲ್ಗೊಂಡ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next