ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 45 ಜನರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದ ಸೋಂಕಿತರ ಸಂಖ್ಯೆ 750ಕ್ಕೆ ಮುಟ್ಟಿದೆ. ಲಾಕ್ ಡೌನ್ ಸಡಿಲವಾಗುತ್ತಿದ್ದಂತೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು, ದಾವಣಗೆರೆ, ಬೆಳಗಾವಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಅದರಲ್ಲೂ ಕೆಲವು ದಿನಗಳ ಕಾಲ ಶಾಂತವಾಗಿದ್ದ ಉತ್ತರ ಕನ್ನಡದಲ್ಲಿ ಒಮ್ಮೇಲೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಇಂದು 12 ಮಂದಿಗೆ ಸೋಂಕು ದೃಢವಾಗಿದೆ.
ಬೆಂಗಳೂರು ನಗರದಲ್ಲಿ ಇಂದು ಏಳು ಜನರಿಗೆ ಸೋಂಕು ದೃಢವಾಗಿದೆ. ಸೋಂಕಿತ ಸಂಖ್ಯೆ 653ರ ಸಂಪರ್ಕದಿಂದ ನಾಲ್ವರಿಗೆ ಸೋಂಕು ತಾಗಿದ್ದರೆ ಮತ್ತೆ ಮೂವರ ಸೋಂಕು ಮೂಲ ಪತ್ತೆ ಮಾಡಲಾಗುತ್ತಿದೆ. ಬಳ್ಳಾರಿಯ 37 ವರ್ಷದ ಮಹಿಳೆಗೆ ಸೋಂಕು ತಾಗಿರುವುದು ದೃಢವಾಗಿದೆ.
ದಾವಣಗೆರೆಯಲ್ಲಿ 14 ಜನರಿಗೆ ಸೋಂಕು ತಾಗಿದೆ. ಸೋಂಕಿತ ಸಂಖ್ಯೆ 556 ರ ಸಂಪರ್ಕದಿಂದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರಿಗೆ ಸೋಂಕು ತಾಗಿದೆ. ಸೋಂಕಿತ ಸಂಖ್ಯೆ 533ರ ಸಂಪರ್ಕದಿಂದ ಹತ್ತು ಜನರಿಗೆ ಕೋವಿಡ್-19 ಸೋಂಕು ತಾಗಿದೆ. ಇವರಲ್ಲಿ 3, 6, 8, 9 ವರ್ಷದ ಮಕ್ಕಳು ಸಹಾ ಸೋಂಕಿತರಾಗಿದ್ದಾರೆ.
ಬೆಳಗಾವಿಯಲ್ಲಿ ಹನ್ನೊಂದು ಜನರಿಗೆ ಸೋಂಕು ತಾಗಿದ್ದು, ಅದರಲ್ಲಿ 10 ಜನರು ಹಿರೇಬಾಗೆವಾಡಿಯವರಾಗಿದ್ದಾರೆ. ಗ್ರಾಮದಲ್ಲಿ ಒಟ್ಟು 47 ಪಾಸಿಟಿವ್ ಕೇಸುಗಳು ಬಂದಿವೆ. ಕುಡಚಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 12 ಸೋಂಕು ಪ್ರಕರಣಗಳು ದಾಖಲಾಗಿದೆ. ಗ್ರಾಮದಲ್ಲಿ ಒಟ್ಟು 47 ಪಾಸಿಟಿವ್ ಕೇಸುಗಳು ಬಂದಿವೆ. ಕುಡಚಿಯಲ್ಲಿ ಒಂದು ಕೇಸು ದಾಖಲಾಗಿ 659ರ ಸಂಪರ್ಕದಿಂದ ಇವರಿಗೆ ಸೋಂಕು ಹರಡಿದೆ, ಐದು ತಿಂಗಳ ಮಗು, ಮೂರು ವರ್ಷ, 11 ವರ್ಷದ ಮಕ್ಕಳು, 83 ವರ್ಷದ ವೃದ್ಧನಿಗೂ ಸೋಂಕು ಹರಡಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 750 ತಲುಪಿದೆ. ಇವರಲ್ಲಿ 30 ಜನರು ಸಾವನ್ನಪ್ಪಿದ್ದಾರೆ. 371 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.