Advertisement

ದಿನಕ್ಕೆ 44 ಕಿ.ಮೀ.ಪ್ರಯಾಣ, ಟಾರ್ಚ್‌ ಬೆಳಕಲ್ಲಿ ಓದು

11:41 PM Apr 30, 2019 | Team Udayavani |

ಸುಬ್ರಹ್ಮಣ್ಯ: ಗ್ರಾಮೀಣ ಪರಿಸರದ ಪ್ರತಿಭಾನ್ವಿತೆ, ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ, ಕೆ.ಆರ್‌.ಕೃಪಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನಿಗಳ ಸಾಲಿನಲ್ಲಿದ್ದಾಳೆ.

Advertisement

ಆರು ಕಿ.ಮೀ.ಕಾಲ್ನಡಿಗೆ, ಬಳಿಕ ಬಸ್‌ ಯಾನ ಸೇರಿ ಒಟ್ಟು ನಿತ್ಯ 44 ಕಿ.ಮೀ.ಶಾಲೆಗೆ ಪ್ರಯಾಣ. ಟ್ಯೂಷನ್‌ ಇಲ್ಲ. ವಿದ್ಯುತ್‌ ಇಲ್ಲದಿದ್ದರೆ ಮಂದ ಬೆಳಕಿನಲ್ಲಿ ಓದು. ಇಷ್ಟೆಲ್ಲ ಪ್ರತಿಕೂಲಗಳ ನಡುವೆ ಕೃಪಾ ಸಾಧನೆ ಮಾಡಿದ್ದಾಳೆ.

ಕಡಬ ತಾಲೂಕಿನ ಕೇನ್ಯ ಗ್ರಾಮದ ಕಣRಲ್‌ ಕೃಷಿಕ ರವಿ ಅಮ್ಮಣ್ಣಾಯ ಮತ್ತು ಗೀತಾ ಅಮ್ಮಣ್ಣಾಯ ದಂಪತಿಯ ದ್ವಿತೀಯ ಪುತ್ರಿ ಕೃಪಾ, ನಿತ್ಯ ಆರು ತಾಸು ಅಭ್ಯಾಸ ನಡೆಸುತ್ತಿದ್ದಳು. ಬಹುತೇಕ ದಿನ ವಿದ್ಯುತ್‌ ಇರುತ್ತಿರಲಿಲ್ಲ. ಆಗ ಟಾರ್ಚ್‌ ಉರಿಸಿಟ್ಟು ಓದುತ್ತಿದ್ದಳು. ಮಾಹಿತಿ ಪಡೆಯಲು ಮೊಬೈಲ್‌, ಇಂಟರ್‌ನೆಟ್‌ ಇತ್ಯಾದಿ ಸೌಲಭ್ಯಗಳಿಲ್ಲ.

“ರಜಾ ದಿನಗಳಲ್ಲಿ ಓದಿಗೆ ಏಕಾಗ್ರತೆ ಬಯಸಿ ಸಮೀಪದ ಬಟ್ರಾಪ್ಪಾಡಿ ಮಹಾವಿಷ್ಣು ದೇವಸ್ಥಾನಕ್ಕೆ ತೆರಳಿ ಓದುತ್ತಿದ್ದೆ. ಅಕ್ಕ ಶಿಲ್ಪಾ ಎಸ್ಸೆಸ್ಸೆಲ್ಸಿಯಲ್ಲಿದ್ದಾಗ ಬಳಸುತ್ತಿದ್ದ ಪುಸ್ತಕಗಳು ನನಗೆ ಅನುಕೂಲವಾಯಿತು. ನೋಟ್ಸ್‌ ಮಾತ್ರ ಅಲ್ಲ, ಪಠ್ಯ ಪುಸ್ತ ಕೂಡ ಓದಬೇಕು. ಹೆತ್ತವರು, ಶಿಕ್ಷಕ ವೃಂದ ಮತ್ತು ಶಿಕ್ಷಣ ಸಂಸ್ಥೆಯ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಾಗಿದೆ’ ಎನ್ನುತ್ತಾಳೆ ಕೃಪಾ.

Advertisement

Udayavani is now on Telegram. Click here to join our channel and stay updated with the latest news.

Next