ತುಮಕೂರು: ಹೊರ ರಾಜ್ಯಗಳಿಂದ 439 ಜಿಲ್ಲೆಗೆ ಆಗಮಿಸಿದ್ದು, ಅವರನ್ನು ವಸತಿ ಶಾಲೆ, ಹೋಟೆಲ್‌ಗಳಲ್ಲಿ ಕ್ವಾರೆಂಟೈನ್ ಮಾಡಲಾಗಿದೆ. ಈಗಾಗಲೇ ಗಂಟಲು ದ್ರವ ಮಾದರಿ ಗಳನ್ನು ಪರೀಕ್ಷೆಗೊಳ ಪಡಿಸಲಾಗಿದ್ದು, ಕೆಲ ವರ ವರದಿ ನೆಗೆಟಿವ್ ಬಂದಿವೆ. ಇನ್ನು ಕೆಲವು ಮಾದರಿಗಳ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯ ದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೂ ಕೋವಿಡ್ -19 ನಾಲ್ಕು ಸಕ್ರಿಯ ಪ್ರಕರಣಗಳಿದ್ದು, ಶೀಘ್ರವಾಗಿ ಗುಣಮುಖರಾಗಲು ಚಿಕಿತ್ಸೆ ನೀಡ ಲಾಗುತ್ತಿದೆ. ಮತ್ತೂಮ್ಮೆ ಅವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುವುದು. ನೆಗೆಟಿವ್ ಬಂದಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗು ವುದು ಎಂದರು.
ನಿಯಮ ಪಾಲಿಸಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಲಾಕ್‌ಡೌನ್ ಸಡಿಲಿಕೆಯಾಗಿದ್ದು, ಜಿಲ್ಲೆಯಲ್ಲಿ ಮಂಗಳ ವಾರ ದಿಂದ ಬಸ್ ಸಂಚಾರ ಆರಂಭವಾಗಿದೆ. ಸಾಮಾಜಿಕ ಅಂತರ ಕಾಯ್ದು ಕೊಂಡು ಖಾಸಗಿ ವಾಹನಗಳ ಸಂಚಾರ ಮಾಡಲು ಅನುಮತಿ ನೀಡಲಾಗಿದೆ. ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂತರ್ ಜಿಲ್ಲೆಗೆ ಪ್ರಯಾಣಿಸಲು ಯಾವುದೇ ಪಾಸ್ ಅಗತ್ಯವಿಲ್ಲ ಎಂದು ತಿಳಿಸಿದರು.
ಭಾನುವಾರ ಸಂಪೂರ್ಣ ಬಂದ್: ಜಿಲ್ಲೆಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ 144 ಸೆಕ್ಷನ್ ಜಾರಿಯಲ್ಲಿ ರುತ್ತದೆ. ಭಾನುವಾರದಂದು ಸಂಪೂರ್ಣ ಲಾಕ್‌ಡೌನ್ ಮಾಡುವುದರಿಂದ ಅಗತ್ಯ ಸೇವೆ ಆಸ್ಪತ್ರೆ, ಮೆಡಿಕಲ್‌ಶಾಪ್‌ಗ್ಳನ್ನು ಹೊರತುಪಡಿಸಿ ಅಂಗಡಿ ಮುಂಗಟ್ಟುಗಳು ತೆರೆಯಲು ಅವಕಾಶವಿರುವುದಿಲ್ಲ ಎಂದರು. ಹೊರ ರಾಜ್ಯದಿಂದ ಜಿಲ್ಲೆಗೆ ಬರುವವರ ಮೇಲೆ ಹೆಚ್ಚಿನ ನಿಗಾವಹಿಸುವ ಸಲುವಾಗಿ ಸಾರ್ವಜನಿಕರು ಹೊರ ರಾಜ್ಯದಿಂದ ಬಂದವರ ಮಾಹಿತಿಯನ್ನು ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತಕ್ಕೆ ನೀಡಬೇಕೆಂದು ಮನವಿ ಮಾಡಿದರು.
ಕೊರೊನಾ ಭೀತಿಯಲ್ಲಿ ಜಿಲ್ಲೆಯ ಜನತೆ: ಕಳೆದ ಎರಡು ತಿಂಗಳಿಂದ ಕೊರೊನಾ ಭೀತಿಯಿಂದ ಲಾಕ್‌ಡೌನ್ ಆಗಿದ್ದ ತುಮಕೂರು ಈಗ ಸಹಜಸ್ಥಿತಿಯತ್ತ ಮರಳುತ್ತಿದ್ದು ಮಂಗಳವಾರದಿಂದ ಬಸ್ ಸಂಚಾರ ಆರಂಭ ಗೊಂಡಿದ್ದು, ಲಾಕ್‌ಡೌನ್ ಸಡಿಲಿಕೆಯಿಂದ ನಗರದಲ್ಲಿ ಹೆಚ್ಚು ಜನ ಸಂದಣಿ ಉಂಟಾಗುತ್ತಿರುವುದು ಮತ್ತು ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ಜನ ಬರುತ್ತಿದ್ದು ಮತ್ತೆ ಎಲ್ಲಿ ಕೊರೊನಾ ಕಾಣಿಸಿ ಕೊಳುವುದೋ ಎನ್ನುವ ಭೀತಿ ಹೆಚ್ಚಿದೆ. ಪ್ರಾರಂಭದಿಂದಲೂ ಜಿಲ್ಲೆಯಲ್ಲಿ 11 ಜನರಿಗೆ ಸೋಂಕು ಕಾಣಿಸಿ ಕೊಂಡು ಇಬ್ಬರು ಮೃತಪಟ್ಟು ಐವರು ಗುಣಮುಖ ವಾಗಿದ್ದಾರೆ, ಇನ್ನೂ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
1,949 ಹೋಂ ಕ್ವಾರೆಂಟೈನ್: ಕೊರೊನಾ ಕಾಣಿಸಿ ಕೊಂಡು ಎರಡು ತಿಂಗಳಾಗಿದೆ ಜಿಲ್ಲೆ ಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿ ಕೊಳ್ಳು ವವರ ಸಂಖ್ಯೆ ಹೆಚ್ಚುತ್ತಿದೆ ಈ ವರಗೆಗೆ 7,379 ಜನರ ಪರೀಕ್ಷೆ ನಡೆದಿದೆ, ಅದರಲ್ಲಿ 6,483 ಜನರಿಗೆ ನೆಗೆಟಿವ್ ಎಂದು ಲ್ಯಾಬ್‌ವರದಿ ಬಂದಿದೆ, ಇನ್ನೂ 1,949 ಹೋಂ ಕ್ವಾರೆಂಟೈನ್ ಮಾಡಲಾಗಿದೆ.
ಆತಂಕ ಹೆಚ್ಚು: ವಿವಿಧ ಸರ್ಕಾರಿ ಆಸ್ಪತ್ರೆ ಗಳಲ್ಲಿ 805 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಆದರೆ 847 ಜನರ ಮಾದರಿ ಪರೀಕ್ಷೆ ಲ್ಯಾಬ್ ನಿಂದ ಬರಬೇಕಾಗಿದೆ. ಈ ನಡುವೆ ಲಾಕ್ ಡೌನ್ ಸಡಿಲಿಕೆ ಯಿಂದ ಜನಸಂಚಾರ ಅಧಿಕವಾಗಿದೆ, ಇದು ಜನರಲ್ಲಿ ಆತಂಕ ಹೆಚ್ಚಲು ಪ್ರಮುಖ ಕಾರಣ ವಾಗಿದೆ.
ಸಹಜ ಸ್ಥಿತಿಯತ್ತ ಜಿಲ್ಲೆ: ಮತ್ತೆ ಜಿಲ್ಲೆಯಲ್ಲಿ ಎಲ್ಲಾ ವ್ಯಾಪಾರ ವಹಿವಾಟುಗಳು ಆರಂಭಗೊಂಡಿದ್ದು, ತುಮಕೂರು ಸಹಜ ಸ್ಥಿತಿಯತ್ತ ಬರುತ್ತಿರುವುದು ಒಂದೆಡೆಯಾದರೆ, ಜನರ ಓಡಾಟ ಹೆಚ್ಚುತ್ತಿದೆ, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವವರು ಹೆಚ್ಚುತ್ತಿ ದ್ದಾರೆ. ಎಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಈಗ ಕಿತ್ತಲೆ ವಲಯದಲ್ಲಿರುವ ತುಮಕೂರು ಕೆಂಪು ವಲಯವಾಗುತ್ತೋ ಎನ್ನುವ ಆತಂಕ ಜನರಲ್ಲಿದೆ.