Advertisement

Nipah: 42 ಸ್ಯಾಂಪಲ್‌ ನೆಗೆಟಿವ್‌: ಕೇರಳ ನಿರಾಳ

08:15 PM Sep 17, 2023 | |

ಕಲ್ಲಿಕೋಟೆ: ನಿಫಾ ಸೋಂಕಿನಿಂದ ಭೀತಿಗೊಳಗಾಗಿರುವ ಕೇರಳಕ್ಕೆ ಸ್ವಲ್ಪಮಟ್ಟಿಗೆ ನಿರಾಳತೆಯ ಸುದ್ದಿ ಎಂಬಂತೆ, ಕಳೆದ 24 ಗಂಟೆಗಳಲ್ಲಿ ಯಾವುದೇ ಹೊಸ ಪ್ರಕರಣ ದೃಢಪಟ್ಟಿಲ್ಲ. ಅಲ್ಲದೇ, ಪರೀಕ್ಷೆಗೆಂದು ಕಳುಹಿಸಲಾಗಿದ್ದ ಎಲ್ಲ 42 ಮಾದರಿಗಳ ಫ‌ಲಿತಾಂಶವೂ ನೆಗೆಟಿವ್‌ ಎಂದು ಬಂದಿದೆ.

Advertisement

ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ, ಹೈರಿಸ್ಕ್ ಸಂಪರ್ಕಿತರು ಎಂದು ಗುರುತಿಸಲಾಗಿದ್ದ 42 ಮಂದಿಯ ಸ್ಯಾಂಪಲ್‌ಗ‌ಳನ್ನು ಪರೀಕ್ಷೆಗೆಂದು ಕಳುಹಿಸಲಾಗಿತ್ತು. ಇವುಗಳ ಫ‌ಲಿತಾಂಶಗಳು ನೆಗೆಟಿವ್‌ ಎಂದು ಬಂದಿದ್ದು, ಇನ್ನೂ ಕೆಲವು ಸ್ಯಾಂಪಲ್‌ಗ‌ಳ ವರದಿ ಬರಬೇಕಷ್ಟೆ ಎಂದು ಭಾನುವಾರ ಬೆಳಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ.

ಮಾರ್ಗಸೂಚಿಯ ಪ್ರಕಾರ, ಕೊನೆಯ ಪಾಸಿಟಿವ್‌ ಪ್ರಕರಣ ಬೆಳಕಿಗೆ ಬಂದ ನಂತರ 42 ದಿನಗಳ ಕಾಲ ಮುನ್ನೆಚ್ಚರಿಕೆ ವಹಿಸಲೇಬೇಕು. ಹೀಗಾಗಿ, ಯಾರೂ ಮೈಮರೆಯಬಾರದು. ಪ್ರತಿಯೊಬ್ಬರೂ ಮಾರ್ಗಸೂಚಿ ಪಾಲಿಸುತ್ತಾ ಎಚ್ಚರಿಕೆಯಿಂದಿರಬೇಕು ಎಂದೂ ಅವರು ಸೂಚಿಸಿದ್ದಾರೆ. ಜತೆಗೆ, ಎಲ್ಲ ನಿಫಾ ಸೋಂಕಿತರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಚಿಂತಾಜನಕ ಸ್ಥಿತಿಗೆ ಹೋಗಿದ್ದ 9 ವರ್ಷದ ಬಾಲಕನ ಆರೋಗ್ಯವೂ ಸುಧಾರಿಸುತ್ತಿದೆ ಎಂದೂ ವೀಣಾ ಅವರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 6 ನಿಫಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ.

ಇದೇ ವೇಳೆ, ಕೇರಳ ಸರ್ಕಾರವು ಇ-ಸಂಜೀವಿನಿ ಟೆಲಿ ಮೆಡಿಸಿನ್‌ ವ್ಯವಸ್ಥೆಯ ಅನ್ವಯ ನಿಫಾ ಪ್ರಕರಣಗಳಿಗೆಂದೇ ಕಲ್ಲಿಕೋಟೆಯಲ್ಲಿ ವಿಶೇಷ ಒಪಿಡಿ(ಹೊರರೋಗಿಗಳ) ಸೇವೆಯನ್ನು ಆರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next