ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಭಾನುವಾರ ಕೋವಿಡ್-19 ಮಹಾ ಸ್ಫೋಟವಾಗಿದ್ದು, ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಒಂದೇ ದಿನ ಬರೋಬ್ಬರಿ 42 ಪಾಸಿಟಿವ್ ಕೇಸ್‌ಗಳು ಪತ್ತೆಯಾಗುವ ಮೂಲಕ ಜಿಲ್ಲೆಯ ಜನರನ್ನು ಕೋವಿಡ್ ತೀವ್ರ ಆತಂಕ್ಕೀಡು ಮಾಡಿದೆ.
413 ಸೋಂಕಿತರು: ಜಿಲ್ಲೆಯಲ್ಲಿ 42 ಹೊಸ ಪ್ರಕರಣ ಪತ್ತೆ ಆಗುವ ಮೂಲಕ ಜಿಲ್ಲಾದ್ಯಂತ ಸೋಂಕಿತರ ಸಂಖ್ಯೆ 413ಕ್ಕೆ ತಲುಪಿದ್ದು, ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದಲ್ಲಿಯೇ ಒಟ್ಟು 25 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯ ಸೋಂಕಿ ತರಲ್ಲಿ ಮೊದಲ ಸ್ಥಾನದಲ್ಲಿರುವ ಗೌರಿಬಿದ ನೂರು ತಾಲೂಕನ್ನು ಚಿಕ್ಕಬಳ್ಳಾಪುರ ಹಿಂದಿಕ್ಕುವ ಸಾಧ್ಯತೆ ದಟ್ಟವಾಗಿವೆ.ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ 9, ಚಿಂತಾಮಣಿ 3, ಶಿಡ್ಲಘಟ್ಟ ತಾಲೂಕಿನಲ್ಲಿ 5 ಪ್ರಕರಣಗಳು ಕಂಡು ಬಂದಿವೆ. ಸೋಂಕಿತರಲ್ಲಿ ಬಹುಪಾಲು ಮಂದಿಗೆ ಬೆಂಗಳೂರು ಪ್ರವಾಸದ ಹಿನ್ನೆಲೆ ಇರುವುದು ಜನರಲ್ಲಿ ಆತಂಕ ಮೂಡಿಸಿದೆ.
227 ಮಂದಿ ಡಿಸ್ಚಾರ್ಜ್: ಜಿಲ್ಲೆಯಲ್ಲಿ ಇದುವರೆಗೂ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 122, ಬಾಗೇಪಲ್ಲಿ 72, ಚಿಂತಾಮಣಿ 54, ಗೌರಿಬಿದನೂರು 136, ಗುಡಿಬಂಡೆ 2 ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ ಒಟ್ಟು 27 ಸೇರಿ ಒಟ್ಟು 413 ಪ್ರಕರಣ ದಾಖಲಾಗಿವೆ. ಈ ಪೈಕಿ ಭಾನುವಾರ 4 ಸೇರಿ ಒಟ್ಟು 227 ಮಂದಿ ಇದುವರೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು 171 ಸಕ್ರಿಯ ಪ್ರಕರಣಗಳು ಇವೆ. ಉಳಿದಂತೆ 14 ಮಂದಿ ಕೋವಿಡ್-19ಗೆ ಬಲಿಯಾಗಿದ್ದಾರೆ.
227 ಮಂದಿ ಡಿಸ್ಚಾರ್ಜ್: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಸಂಖ್ಯೆ ಹೆಚ್ಚಾಗುತ್ತಿದ್ದು, ಇದುವರೆಗೂ ಸೋಂಕಿ ತರ ಪೈಕಿ 227 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಇನ್ನೂ 171 ಸಕ್ರಿಯ ಕೋವಿಡ್ ಪ್ರಕರಣಗಳು ಇವೆ. ಜಿಲ್ಲೆಯಲ್ಲಿ 14 ಮಂದಿ ಬಲಿಯಾದರೆ, ಕೋವಿಡ್ ಅಲ್ಲದ ಅನ್ಯ ಕಾರಣಕ್ಕೆ ಚಿಕ್ಕಬಳ್ಳಾಪುರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.