Advertisement
ಹೆಗ್ಗೊಠಾರ ಗ್ರಾಮದ ಆರು ಕುಟುಂಬದ ಪ್ರತಿನಿಧಿಗಳು 40 ಕಿ.ಮೀ. ದೂರದಿಂದ ಕಪಿಲಾ ನದಿ ನೀರನ್ನು ಬರಿಗಾಲಲ್ಲಿ ಹೊತ್ತು ತಂದು ಶಿವನಿಗೆ ಅಭಿಷೇಕ ಮಾಡುತ್ತಾರೆ. ಹೆಗ್ಗೊಠಾರ ಗ್ರಾಮದ ಆರು ಮನೆಗಳ ತಲಾ ಒಬ್ಬೊಬ್ಬರು ಶಿವರಾತ್ರಿ ದಿನ ಬೆಳ್ಳಂಬೆಳಗ್ಗೆಯೇ ಹೊರಟು 40 ಕಿ.ಮೀ. ದೂರದ ಕಪಿಲಾ ನದಿಯಿಂದ ಬರಿಗಾಲಲ್ಲಿ ನಡೆದು ತಾಮ್ರದ ಬಿಂದಿಗೆಯಲ್ಲಿ ನೀರು ಹೊತ್ತು ತಂದು ಗ್ರಾಮದ ಸಿದ್ಧªರಾಮೇಶ್ವರನ ಅಭಿಷೇಕಕ್ಕೆ ನೀಡುತ್ತಾರೆ.
Related Articles
Advertisement
ಸಿದ್ಧರಾಮೇಶ್ವರನ ಸನ್ನಿಧಿಯಲ್ಲಿ ವಿಶೇಷ ಪೂಜೆ: ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಬಿಂದಿಗೆ ಇಳಿಸುತ್ತಾರೆ. ಇವರ ಜೊತೆಗೆ ಗ್ರಾಮದ ಬಾವಿಯಿಂದ 101 ಬಿಂದಿಗೆ ನೀರು ಹೊತ್ತುಕೊಂಡು ಜನರು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿ, ಸಿದ್ಧರಾಮೇಶ್ವರನ ಸನ್ನಿಧಿಯಲ್ಲಿ ಕಪಿಲಾ ಜಲಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ಕಪಿಲಾ ಜಲದೊಂದಿಗೆ ಬಿಲ್ವಪತ್ರೆಯನ್ನು ಹಾಕಿ ಸಿದ್ಧರಾಮೇಶ್ವರನಿಗೆ ರಾತ್ರಿಯಿಡೀ 5 ಬಾರಿ ಅಭಿಷೇಕ, ಪೂಜೆ ಸಲ್ಲಿಸಲಾಗುತ್ತದೆ. ಇಡೀ ರಾತ್ರಿ ಗ್ರಾಮಸ್ಥರೆಲ್ಲ ಒಟ್ಟಾಗಿ ದೇವಸ್ಥಾನದಲ್ಲಿ ಜಾಗರಣೆಯಲ್ಲಿ ಪಾಲ್ಗೊಳ್ಳುತ್ತಾರೆ.
ಚೋಳರ ಕಾಲದ ಸಿದ್ಧರಾಮೇಶ್ವರ ದೇಗುಲ: ಹೆಗ್ಗೊಠಾರ ಗ್ರಾಮದಲ್ಲಿ ಸುಮಾರು 700 ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾಗಿರುವ ಸಿದ್ಧರಾಮೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಶಿವರಾತ್ರಿಯಂದು ಈ ವಿಶೇಷ ಪೂಜೆ ನಡೆಯುತ್ತದೆ. ಸಿದ್ಧರಾಮೇಶ್ವರನಿಗೆ ಕಪಿಲಾ ನದಿಯಿಂದ ನೀರು ತಂದು ಪೂಜೆ ಸಲ್ಲಿಸುವ ವಾಡಿಕೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.