ನವದೆಹಲಿ: ಭಾರತದಲ್ಲಿ ಈವರೆಗೆ ಒಟ್ಟು 40,845 ಬ್ಲ್ಯಾಕ್ ಫಂಗಸ್(ಮ್ಯೂಕೋರೋಮೈಕೋಸಿಸ್) ಪ್ರಕರಣ ಪತ್ತೆಯಾಗಿದ್ದು, ಇದೊಂದು ಅಪರೂಪದ ಫಂಗಸ್ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಸೋಮವಾರ(ಜೂನ್ 28) ತಿಳಿಸಿದ್ದು, ಬ್ಲ್ಯಾಕ್
ಫಂಗಸ್ ನಿಂದ ಸಾವನ್ನಪ್ಪಿದವರ ಸಂಖ್ಯೆ 3,129ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:ಇಂದಿನಿಂದ ಕಲ್ಯಾಣ ಮಂಟಪ ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್
ಕೋವಿಡ್ 19 ಕುರಿತು ಹರ್ಷ್ ವರ್ಧನ್ ಅವರು ಉನ್ನತ ಮಟ್ಟದ ಸಚಿವರ ಜತೆ 29ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಲ್ಲದೇ ಒಟ್ಟು ಕೋವಿಡ್ ಸೋಂಕಿತ 34,940 ರೋಗಿಗಳಲ್ಲಿ (ಶೇ.85.5), 26,187 ಮಂದಿ ಮಧುಮೇಹದಿಂದ ಬಳಲುತ್ತಿದ್ದು, 21,523 ಸೋಂಕಿತರು ಸ್ಟಿರಾಯ್ಡ್ ನಿಂದ ಸೋಂಕಿಗೆ ಒಳಗಾಗಿರುವುದಾಗಿ ವಿವರಿಸಿದ್ದಾರೆ.
ಒಟ್ಟು 13,083 ರೋಗಿಗಳು 18-45 ವರ್ಷ ವಯಸ್ಸಿನವರಾಗಿದ್ದಾರೆ(ಶೇ.32), 17,464 ಜನರು 45-60 ವರ್ಷ ವಯಸ್ಸಿನವರಾಗಿದ್ದಾರೆ
(ಶೇ.42), 10,082 ರೋಗಿಗಳು 60ಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕೋವಿಡ್ ವ್ಯಾಕ್ಸಿನೇಷನ್ ನ ಹೊಸ ನೀತಿಯ ಪ್ರಕಾರ, ಕೇಂದ್ರ ಸರ್ಕಾರವೇ ಲಸಿಕೆಯನ್ನು ಖರೀದಿಸುವ ಮತ್ತು ಸರಬರಾಜು(ಉಚಿತವಾಗಿ) ಮಾಡಲಿದೆ. ಲಸಿಕೆ ತಯಾರಕರು ಉತ್ಪಾದಿಸುತ್ತಿರುವ ಶೇ.75ರಷ್ಟು ಲಸಿಕೆಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸುತ್ತಿರುವುದಾಗಿ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.