Advertisement

ಲೋಕ ಅದಾಲತ್‌ನಲ್ಲಿ 401 ಪ್ರಕರಣ ಇತ್ಯರ್ಥ

12:20 PM Jul 15, 2019 | Suhan S |

ಮಂಡ್ಯ: ರಾಷ್ಟ್ರೀಯ ಲೋಕ ಅದಾಲತ್‌ ಅಂಗವಾಗಿ ಪಟ್ಟಣದ ಜೆಎಂಎಫ್‌ ನ್ಯಾಯಾಲಯದಲ್ಲಿ ನಡೆದ ಬೃಹತ್‌ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ವಿವಿಧ ರಾಜ್ಯಗಳಿಗೆ ಸಂಬಂಧಿಸಿದಂತೆ 401 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿ 2.72 ಕೋಟಿ ರೂ. ಪರಿಹಾರ ನೀಡಲು ಆದೇಶಿದರು.

Advertisement

ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏಕ ಕಾಲದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಹಿರಿಯ ಶ್ರೇಣಿ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಗಂಭೀರ ಸ್ವರೂಪದ 972 ಪ್ರಕರಣಗಳಲ್ಲಿ 401 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ ನ್ಯಾಯಾಧೀಶರು, 2.72 ಕೋಟಿ ಪರಿಹಾರ ನೀಡಲು ತೀರ್ಪು ನೀಡಿದರು.

ಎಷ್ಟು ಪ್ರಕರಣ, ಪರಿಹಾರ:ಹಿರಿಯ ಸಿವಿಲ್ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಲಯ, 1ನೇ ಅಪರ ಸಿವಿಲ್ ನ್ಯಾಯಾಲಯ, 2ನೇ ಅಪರ ಸಿವಿಲ್ ನ್ಯಾಯಾಲಯ ಹಾಗೂ 3 ಮತ್ತು 4ನೇ ಅಪರ ಸಿವಿಲ್ ನ್ಯಾಯಾಲಯಗಳಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಮೋಟಾರು ವಾಹನ ಅಪಘಾತದಲ್ಲಿ 41 ಪ್ರಕರಣದಲ್ಲಿ 1.30 ಕೋಟಿ, 41 ಸಿವಿಲ್ ಪ್ರಕರಣಗಳಲ್ಲಿ 73 ಲಕ್ಷ ರೂ. ಪರಿಹಾರ, 67 ಚೆಕ್‌ ಬೌನ್ಸ್‌ ಪ್ರಕರಣಗಳಲ್ಲಿ 40.57 ಲಕ್ಷ ರೂ. ಪರಿಹಾರ, ಭೂ ಸ್ವಾಧೀನದ 10 ಪ್ರಕರಣಗಳಲ್ಲಿ 49.38 ಲಕ್ಷ ರೂ. ಪರಿಹಾರ, ಕ್ಕೆ ನ್ಯಾಯಾಧೀಶರು ಆದೇಶ ನೀಡಿದರು.

ಇತರೆ 257 ಪ್ರಕರಣಗಳಲ್ಲಿ 33 ಅಪರಾಧ, 224 ಸಿವಿಲ್ ಪ್ರಕರಣ ಸೇರಿದಂತೆ ಇತರೆ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.

ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಗಣೇಶ್‌, ಪ್ರಧಾನ ಸಿವಿಲ್ ನ್ಯಾಯಾಧೀಶ ಪಿ.ಎಂ.ಬಾಲಸುಬ್ರಹ್ಮಣ್ಯ, 1ನೇ ಅಪರ ಸಿವಿಲ್ ನ್ಯಾಯಾಧೀಶ ಕೆ.ಎನ್‌.ಶಿವಕುಮಾರ್‌, 2ನೇ ಅಪರ ನ್ಯಾಯಾಧೀಶ ಆದಿತ್ಯ ಆರ್‌.ಕಲಾಲ್, 3ನೇ ಅಪರ ನ್ಯಾಯಾಧೀಶ ಸೋಮನಾಥ್‌, 4ನೇ ಅಪರ ನ್ಯಾಯಾಧೀಶೆ ತೃಪ್ತಿ ಧರಣಿ ಲೋಕ ಅದಾಲತ್‌ ಮೂಲಕ ತಮ್ಮ ನ್ಯಾಯಾಲಯದ ವ್ಯಾಪ್ತಿಯ ಪ್ರಕರಣಗಳನ್ನು ಏಕಕಾಲದಲ್ಲಿ ಇತ್ಯರ್ಥಪಡಿಸಿದರು.

Advertisement

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಜಿ.ಎನ್‌.ಸತ್ಯಾ, ಉಪಾಧ್ಯಕ್ಷ ಕೆಂಪೇಗೌಡ, ಕಾರ್ಯದರ್ಶಿ ಎ.ಶಿವಣ್ಣ, ಹಿರಿಯ ವಕೀಲರಾದ ಎಚ್. ಮಾದೇಗೌಡ, ಎಚ್.ವಿ.ಬಾಲರಾಜು, ಬಿ. ಅಪ್ಪಾಜಿಗೌಡ, ಮಹದೇವಯ್ಯ, ಗಿರೀಶ್‌, ಎಂ.ಎಲ್.ಶಿವಣ್ಣ ಸೇರಿದಂತೆ ವಕೀಲರು ಅದಾಲತ್‌ನಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next