Advertisement

ರೈತರಿಗೆ ನೇರವಾಗಿ ಎಕರೆಗೆ 4 ಸಾವಿರ ನಗದು ಘೋಷಣೆ 

06:47 AM Jan 03, 2019 | |

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರೈತರನ್ನು ಮೆಚ್ಚಿಸಲು ಕೇಂದ್ರ ಸರ್ಕಾರ ಪ್ರತಿ ಎಕರೆಗೆ 4 ಸಾವಿರ ರೂ. ನೇರ ನಗದು ಘೋಷಣೆ ಮಾಡುವ ಸಾಧ್ಯತೆಯಿದೆ.ಅಷ್ಟೇ ಅಲ್ಲ, ಪ್ರತಿ ರೈತರಿಗೆ 1 ಲಕ್ಷ ರೂ. ಬಡ್ಡಿ ರಹಿತ ಸಾಲ ಸೌಲಭ್ಯವನ್ನೂ ಇದೇ ವೇಳೆ ಘೋಷಿಸಬಹುದಾಗಿದೆ.

Advertisement

ನೇರ ನಗದು ಪಾವತಿಗಾಗಿ ಸರ್ಕಾರಕ್ಕೆ 2 ಲಕ್ಷ ಕೋಟಿ ರೂ. ಹೊರೆಯಾದರೆ, ಬಡ್ಡಿ ರಹಿತ ಸಾಲಕ್ಕಾಗಿ ಸರ್ಕಾರಕ್ಕೆ 28-30 ಸಾವಿರ ಕೋಟಿ ರೂ.ಹೊರೆಯಾಗಲಿದೆ. ಈಗಾಗಲೇ ರಸಗೊಬ್ಬರಕ್ಕೆ ನೀಡಲಾಗುತ್ತಿರುವ ಸಬ್ಸಿಡಿ ಹಾಗೂ ಇತರ ಸಣ್ಣ ಸ್ಕೀಮ್‌ಗಳನ್ನು ಇದರಲ್ಲಿಸೇರ್ಪಡೆಗೊಳಿಸುವ ಸಾಧ್ಯತೆಯಿದೆ.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ 3 ರಾಜ್ಯಗಳಲ್ಲಿ ಭಾರಿ ಸೋಲುಂಡ ಹಿನ್ನೆಲೆಯಲ್ಲಿ ರೈತರಿಗಾಗಿ ಯೋಜನೆ ಗಳನ್ನು ಪ್ರಕಟಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಪ್ರಧಾನಿ ಸಚಿವಾಲಯ ಮತ್ತು ನೀತಿ ಆಯೋಗ ಸಭೆ ನಡೆಸಿ ಈ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದೆ. ಈ ವಾರದಲ್ಲೇ
ಈ ಯೋಜನೆಯನ್ನು ಅಂತಿಮಗೊಳಿ ಸುವ ಸಾಧ್ಯತೆಯಿದೆ. ವಿವಿಧ ಖಾತೆಗಳ ಅಧಿಕಾರಿಗಳೆಲ್ಲರೂ ಒಟ್ಟಾಗಿ ಈ ಯೋಜನೆಯನ್ನು ಅಂತಿಮಗೊಳಿಸುವಂತೆ ಪ್ರಧಾನಿ ಸಚಿವಾಲಯ ಸೂಚಿಸಿತ್ತು.

ಸದ್ಯ ಬೆಳೆ ಸಾಲಕ್ಕೆ ಶೇ. 4 ರ ಬಡ್ಡಿ ವಿಧಿಸಲಾಗುತ್ತಿದೆ. ಆದರೆ ಈ ಹೊಸ ವಿಧದ ಸಾಲಕ್ಕೆ 1 ಲಕ್ಷ ರೂ.ವರೆಗೆ ಬ್ಯಾಂಕ್‌ಗಳು ಬಡ್ಡಿ ವಿಧಿಸುವಂತಿಲ್ಲ. ಅಲ್ಲದೆ ಎಕರೆಗೆ 50 ಸಾವಿರ ರೂ. ಬಡ್ಡಿ ರಹಿತ ಸಾಲವನ್ನು ನಿಗದಿಪಡಿಸಲಾಗಿದ್ದು, ಒಬ್ಬರ ರೈತರಿಗೆ 1 ಲಕ್ಷ ರೂ.ವರೆಗೆ ನೀಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next