Advertisement

6 ಗಂಟೆಗಳ ಕಾಲ ನಿಷ್ಟ್ರಿಯ; ಬರೋಬ್ಬರಿ 40 ಸಾವಿರ ಕೋಟಿ ನಷ್ಟ!

10:49 AM Oct 06, 2021 | Team Udayavani |

ವಾಷಿಂಗ್ಟನ್‌: ಫೇಸ್‌ಬುಕ್‌, ವ್ಯಾಟ್ಸ್‌ಆ್ಯಪ್‌,  ಮತ್ತು ಇನ್‌ಸ್ಟಾಗ್ರಾಂಗಳು 6 ಗಂಟೆಗಳ ಕಾಲ ನಿಷ್ಟ್ರಿಯವಾದ ಕಾರಣದಿಂದಾಗಿ ಫೇಸ್‌ಬುಕ್‌ ಸಂಸ್ಥೆಯ ಸ್ಥಾಪಕ ಮಾರ್ಕ್‌ ಝುಕರ್‌ಬರ್ಗ್‌ಗೆ ಬರೋಬ್ಬರಿ 40 ಸಾವಿರ ಕೋಟಿ ರೂ. ನಷ್ಟವುಂಟಾಗಿದೆ!

Advertisement

ಸೋಮವಾರ ರಾತ್ರಿ 9ಗಂಟೆಯಿಂದ ಮಂಗಳವಾರ ಬೆಳಗಿನ ಜಾವ 4 ಗಂಟೆವರೆಗೆ ಈ ಮೂರು ಸಾಮಾಜಿಕ ಜಾಲತಾಣಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದವು. ಜಗತ್ತಿನ ಯಾವ ಭಾಗದಲ್ಲೂ ಇವು ಕಾರ್ಯಾಚರಣೆ ಮಾಡುತ್ತಿರಲಿಲ್ಲ.

ಅತ್ತ ಅಮೆರಿಕದಲ್ಲಿನ ಷೇರುಪೇಟೆಯಲ್ಲೂ ಫೇಸ್‌ಬುಕ್‌ ಷೇರುಗಳು ಶೇ.5ರಷ್ಟು ಕುಸಿತವಾದವು. ಹೀಗಾಗಿ ಕಳೆದ ವಾರವಷ್ಟೇ 140 ಬಿಲಿಯನ್‌ ಡಾಲರ್‌ ಆಸ್ತಿ ಹೊಂದಿ 5ನೇ ಸ್ಥಾನದಲ್ಲಿದ್ದ ಝುಕರ್‌ಬರ್ಗ್‌, ಸೋಮವಾರ ರಾತ್ರಿಯ ಕ್ರ್ಯಾಷ್‌ನಿಂದಾಗಿ 6ನೇ ಸ್ಥಾನಕ್ಕೆ ಕುಸಿದರು. ಈಗ ಅವರ ಒಟ್ಟು ಆಸ್ತಿ ಮೌಲ್ಯ 120 ಬಿಲಿಯನ್‌ ಡಾಲರ್‌ಗೆ ಕುಸಿತ ಕಂಡಿದೆ.

ರಾತ್ರಿಯಿಡೀ ಪರದಾಟ
ಮೂರು ಜಾಲತಾಣಗಳು ನಿಷ್ಕ್ರಿಯವಾಗಿದ್ದರಿಂದ ಭಾರತವೂ ಸೇರಿದಂತೆ ಜಗತ್ತಿನ ಎಲ್ಲ ಭಾಗಗಳಲ್ಲೂ ಭಾರೀ ಪರದಾಟ ಉಂಟಾಯಿತು. ಅದರಲ್ಲೂ ವಾಟ್ಸ್‌ಆ್ಯಪ್‌ ಸ್ಥಗಿತವಾಗಿದ್ದರಿಂ ಹೆಚ್ಚು ತೊಂದರೆಯಾಯಿತು. ಕೆಲವರು ತಮ್ಮ ಮೊಬೈಲ್‌ಗಳಲ್ಲೇ ಏನೋ ಸಮಸ್ಯೆಯಾಗಿದೆ, ಹೀಗಾಗಿ ವ್ಯಾಟ್ಸ್‌ಆ್ಯಪ್‌, ಕೆಲಸ ಮಾಡುತ್ತಿಲ್ಲ ಎಂದು ಅಲವತ್ತುಗೊಂಡರು.

ಇದನ್ನೂ ಓದಿ:ಮಟ್ಟುಗುಳ್ಳ ಬೆಳೆಗಾರರಿಗೆ ಪರಿಹಾರ ಧನ ವಿತರಿಸಿದ ಶಾಸಕ ಲಾಲಾಜಿ ಆರ್ ಮೆಂಡನ್

Advertisement

ಸ್ಥಗಿತಕ್ಕೆ ಕಾರಣ
ಸರ್ವರ್‌ನ ರೌಟರ್‌ನಲ್ಲಿ ಗ್ಲಿಚಸ್‌ ಮತ್ತು ಕಾನ್ಫಿಗರೇಶನ್‌ನಲ್ಲಿ ಬದಲಾವಣೆಯಾಗಿದ್ದರಿಂದ ಈ ಪ್ರಮಾಣದ ತೊಂದರೆಯಾಯಿತು ಎಂದು ಫೇಸ್‌ಬುಕ್‌ ಮೂಲಗಳು ಹೇಳಿವೆ. ಇದನ್ನು ಸರಿ ಮಾಡಲು ಬಹಳಷ್ಟು ಸಮಯ ಹಿಡಿದಿದೆ. ಸಿಬ್ಬಂದಿಯೇ ಕ್ಯಾಲಿಫೋರ್ನಿಯಾದಲ್ಲಿರುವ ಡೇಟಾ ಸೆಂಟರ್‌ಗೆ ತೆರಳಿ ಸರಿ ಮಾಡಿದೆ. ಈ ಮಧ್ಯೆ 2019ರಲ್ಲೂ ಫೇಸ್‌ಬುಕ್‌ ಒಂದು ಗಂಟೆಗಳ ಕಾಲ ಡೌನ್‌ ಆಗಿತ್ತು.

ಕ್ಷಮೆ ಕೋರಿದ ಝುಕರ್‌ಬರ್ಗ್‌
ಆರು ಗಂಟೆಗಳ ಕಾಲ ಮೂರು ಜಾಲತಾಣಗಳ ಸೇವೆ ಸ್ಥಗಿತವಾಗಿದ್ದಕ್ಕೆ ಫೇಸ್‌ಬುಕ್‌ ಸ್ಥಾಪಕ ಮತ್ತು ಸಿಇಓ ಮಾರ್ಕ್‌ ಝುಕರ್‌ಬರ್ಗ್‌ ಕ್ಷಮೆ ಕೋರಿದ್ದಾರೆ. ಅಲ್ಲದೆ, ಗ್ರಾಹಕರ ಡೇಟಾ ಕೂಡ ಸುರಕ್ಷಿತವಾಗಿದೆ ಎಂದು ಫೇಸ್‌ಬುಕ್‌ ಸಿಬ್ಬಂದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next