Advertisement

40,000 ಕೋಟಿ ಪಾವತಿ ಬಾಕಿ ಚುಕ್ತಾ

11:34 PM Sep 27, 2019 | Team Udayavani |

ಹೊಸದಿಲ್ಲಿ: ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸರಕಾರ ಉಳಿಸಿಕೊಂಡಿದ್ದ ಜಿಎಸ್‌ಟಿ ಮರುಪಾವತಿಯನ್ನು ಬಹುತೇಕ ಪಾವತಿ ಮಾಡಲಾಗಿದೆ. ಉಳಿದ ಮೊತ್ತವನ್ನು ಇನ್ನು ಕೆಲವೇ ದಿನಗಳಲ್ಲಿ ಮರುಪಾವತಿ ಮಾಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮಾನ್‌ ಹೇಳಿದ್ದಾರೆ.

Advertisement

ಸರಕಾರವು ವಿತ್ತ ಪ್ರಗತಿಗೆ ಉತ್ತೇಜನ ನೀಡಲು ಉದ್ದೇಶಿಸಿದ್ದು, ಮುಂದಿನ ನಾಲ್ಕು ತ್ತೈಮಾಸಿಕದ ವೆಚ್ಚ ಯೋಜನೆಯನ್ನು ಒದಗಿ ಸುವಂತೆ ಸಚಿವಾಲಯಗಳಿಗೆ ಸೂಚಿ ಸಲಾಗಿದೆ. ಒಟ್ಟು 60 ಸಾವಿರ ಕೋಟಿ ರೂ. ಬಾಕಿಯ ಪೈಕಿ 40 ಸಾವಿರ ಕೋಟಿ ರೂ. ಮರುಪಾವತಿ ಮಾಡಲಾಗಿದೆ ಎಂದು ವೆಚ್ಚ ಕಾರ್ಯದರ್ಶಿ ಜಿ.ಜಿ. ಮುರ್ಮು ಹೇಳಿದ್ದಾರೆ.

ವೆಚ್ಚ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ಸಭೆ ನಡೆದಿದ್ದು, ಬಾಕಿ ಪಾವತಿ ನಿಟ್ಟಿನಲ್ಲಿ ಅತ್ಯಂತ ಮಹತ್ವ ದ್ದಾಗಿತ್ತು. ಕಳೆದ ಕೆಲವು ದಿನಗಳಿಂದಲೂ ಸರಕಾರ ಭಾರಿ ಪ್ರಮಾಣದ ಬಾಕಿ ಪಾವತಿ ಉಳಿಸಿಕೊಂಡಿದ್ದು ಕೂಡ ವಿತ್ತ ಪ್ರಗತಿಗೆ ಅಡ್ಡಿ ಉಂಟು ಮಾಡಿತ್ತು ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಪಾವತಿಗಳನ್ನು ತ್ವರಿತಗತಿಯಲ್ಲಿ ಮಾಡಲಾಗಿದೆ ಎಂದು ಸಭೆಯ ಅನಂತರ ಸುದ್ದಿಗೋಷ್ಠಿಯಲ್ಲಿ ಸಚಿವೆ ನಿರ್ಮಲಾ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next