ಜಮಖಂಡಿ: ವಿಧಾನಸಭಾ ಮತಕ್ಷೇತ್ರದ ಜಮಖಂಡಿ ನಗರದ ನಗರಸಭೆ 11 ವಾರ್ಡ್‌ಗಳಲ್ಲಿ ಜು. 5ರಿಂದ 12ರವರೆಗೆ ನಾಲ್ಕು ಸಾವಿರ ಸಸಿ ನೆಡುವ ಮೂಲಕ ಗ್ರೀನ್ ಜಮಖಂಡಿ ಯೋಜನೆ ಯಶಸ್ವಿಗೊಳಿಸಲಾಗುತ್ತಿದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ 31 ವಾರ್ಡ್ ಸದಸ್ಯರಲ್ಲಿ ಕಳೆದ ವಾರದ ಹಿಂದೆ ಕ್ರಿಯಾಯೋಜನೆ ಸಿದ್ದಪಡಿಸಲು ಮನವಿ ಮಾಡಲಾಗಿತ್ತು. ಕಳೆದ ಒಂದು ವಾರದಲ್ಲಿ 31 ವಾರ್ಡ್ ಸದಸ್ಯರಲ್ಲಿ ಕೇವಲ 11 ವಾರ್ಡ್ ಸದಸ್ಯರು ಕ್ರಿಯಾಯೋಜನೆ ಸಿದ್ದಪಡಿಸಲಾಗಿದೆ. ಉಳಿದ 20 ವಾರ್ಡ್‌ನ ಸದಸ್ಯರು, ನೋಡಲ್ ಅಧಿಕಾರಿಗಳು ಎರಡು ದಿನದಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಿ ಸಂಬಂಧಿಸಿದ ತಹಶೀಲ್ದಾರ್ ಪ್ರಶಾಂತ ಚನಗೊಂಡ, ವಲಯ ಅರಣ್ಯಾಧಿಕಾರಿ ಎಸ್.ಡಿ.ಬಬಲಾದಿ ಅವರಿಗೆ ತಲುಪಿಸಬೇಕು. ಹಸಿರು ಪರಿಸರ ನಿರ್ಮಾಣಕ್ಕಾಗಿ ನಿಮ್ಮೆಲ್ಲರ ನಿಸ್ವಾರ್ಥ ಸೇವೆ ಅವಶ್ಯಕವಾಗಿದೆ. ನಗರದ ಎಲ್ಲ ಜನತೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರಕಾರಿ ನೌಕರರು, ರೋಟರಿ, ಲಯನ್ಸ್ ಸಂಸ್ಥೆಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಗ್ರೀನ್ ಮತ್ತು ಕ್ಲೀನ್ ಸಿಟಿ ಯೋಜನೆಯಲ್ಲಿ ಭಾಗವಹಿಸಬೇಕು ಎಂದರು.
ಸಭೆಯಲ್ಲಿ ಉಪವಿಭಾಗಾಕಾರಿ ಇಕ್ರಮ್ ಶರೀಫ್, ತಹಶೀಲ್ದಾರ್ ಪ್ರಶಾಂತ ಚನಗೊಂಡ, ವಿಷೇಶ ತಹಶೀಲ್ದಾರ ಮೆಹಬೂಬಿ, ತಾಲೂಕಾ ಅಕಾರಿಗಳು, ನೋಡಲ್ ಅಧಿಕಾರಿಗಳು, ನಗರಸಭೆ ಸದಸ್ಯರು ಪಾಲ್ಗೊಂಡಿದ್ದರು.
Advertisement
ನಗರದ ಮಿನಿ ವಿಧಾನಸೌಧ ಕಚೆೇರಿಯಲ್ಲಿ ಗ್ರೀನ್ ಮತ್ತು ಕ್ಲೀನ್ ಜಮಖಂಡಿ ಯೋಜನೆ ನಗರಸಭೆ ಸದಸ್ಯರ ಹಾಗೂ ವಾರ್ಡ್ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಮಖಂಡಿ ನಗರ ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಗ್ರೀನ್ ಮತ್ತು ಕ್ಲೀನ್‌ಸಿಟಿ ಯೋಜನೆಯಲ್ಲಿ ಮಳೆಗಾಲದ 4 ತಿಂಗಳ ಅವಇಯಲ್ಲಿ ಕನಿಷ್ಠ 30ಸಾವಿರ ಸಸಿ ನೆಡುವ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಮತಕ್ಷೇತ್ರದ ಪ್ರತಿಯೊಬ್ಬ ಪ್ರಜೆ, ಮಕ್ಕಳು ಸ್ವ-ಇಚ್ಚೆಯಿಂದ ಯೋಜನೆಯಲ್ಲಿ ಭಾಗವಹಿಸಬೇಕು. • ಆನಂದ ಸಿದ್ದು ನ್ಯಾಮಗೌಡ, ಶಾಸಕರು