Advertisement
ಕೋಣನಕುಂಟೆ ಕ್ರಾಸ್‌ನ ಜೆ.ಪಿ. ಇಂಡಸ್ಟ್ರೀಯಲ್ ಬಳಿಯ ಅಶೋಕ್ ರೆಡ್ಡಿ ಮಾಲೀಕ್ವತದ ಲೊವೆಬಲ್ ಲಾಂಜಲಿ ಗಾಮೆಂìಟ್ಸ್‌ನಲ್ಲಿ ಘಟನೆ ನಡೆದಿದೆ. ಈ ಗಾರ್ಮೆಂಟ್ಸ್‌ನಲ್ಲಿ ಸುಮಾರು 400ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದು, ಭಾನುವಾರ ರಜೆ ಇದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಇನ್ನು ಹೆಚ್ಚುವರಿ ಕೆಲಸ ಮಾಡಿದ ಕಾರ್ಮಿಕರು ಮಧ್ಯಾಹ್ನವೇ ಮನೆಗೆ ತೆರಳಿದ್ದರಿಂದ ಭಾರೀ ಅನಾಹುತ ತಪ್ಪಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಆದರೆ, ಎಷ್ಟು ಮೌಲ್ಯದ ವಸ್ತುಗಳು ಹಾನಿಗೀಡಾಗಿವೆ ಎಂದು ತಿಳಿದು ಬಂದಿಲ್ಲ. ಇನ್ನು ಬೆಂಕಿ ಕಿನ್ನಾಲಿಗೆಯನ್ನ ತಡೆಯಲು ಅಕ್ಕ-ಪಕ್ಕದ ಕಟ್ಟಡಗಳಲ್ಲಿದ್ದ ನೀರನ್ನು ಬಳಸಿಕೊಳ್ಳಬೇಕಾಯಿತು ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ನೋಟಿಸ್ ಜಾರಿ?: ಸಾಮಾನ್ಯವಾಗಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಅಗ್ನಿಅವಘಡ ಕುರಿತ ಮುಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿಯಮವಿದೆ. ಆದರೆ, ಲೊವೆಬಲ್ ಲಾಂಜಲಿ ಗಾರ್ಮೆಂಟ್ಸ್ ಅಗ್ನಿನಂದಕಗಳನ್ನಾಗಲಿ, ನೀರಿನಸೌಲಭ್ಯವನ್ನಾಗಲಿ ಒಟ್ಟಾರೆ ಅಗ್ನಿ ಅವಘಡ ಬಗ್ಗೆ ತೆಗೆದುಕೊಳ್ಳಬೇಕಾದ ಮುಜಾಗ್ರತ ಕ್ರಮಗಳನ್ನು ಕೈಗೊಂಡಿಲ್ಲ.
ಈ ಸಂಬಂಧ ವರದಿ ಬಂದಿದ್ದು, ಒಂದೆರಡು ದಿನಗಳಲ್ಲಿ ಗಾರ್ಮೆಂಟ್ಸ್‌ನ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುವುದು. ಹಾಗೆಯೇ ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ನೀಡಿದ್ದೇವೆ. ಪ್ರಾಥಮಿಕ ಮಾಹಿತಿ ಪ್ರಕಾರ ಶಾರ್ಟ್ ಸರ್ಕ್ನೂಟ್‌ನಿಂದ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ ಎಂದು ಅವರು ವಿವರಿಸಿದರು.
ಕೆಲಸಕ್ಕೆ ಬಂದಾಗ ಕಂಡದ್ದು ಬೂದಿ ಮಾತ್ರ!: ಶಾರ್ಟ್ ಸರ್ಕ್ನೂಟ್‌ನಿಂದ ಸಂಭವಿಸಿದ ಅಗ್ನಿ ಅವಘಡದಿಂದ ಸುಮಾರು 400ಕ್ಕೂ ಅಧಿಕ ಕಾರ್ಮಿಕರ ಸ್ಥಿತಿ ಅತಂತ್ರವಾಗಿದೆ. ಪ್ರಮುಖವಾಗಿ ಗಾರ್ಮೆಂಟ್ಸ್‌ನಲ್ಲಿ ದುಡಿಯುವ ಮಹಿಳೆಯರ ಸ್ಥಿತಿ ಹೇಳತೀರದಾಗಿದೆ. ಭಾನುವಾರ ಅರ್ಧ ದಿನ ಕೆಲಸ ಮುಗಿಸಿ ಹೋಗಿದ್ದ ಕಾರ್ಮಿಕರು ಎಂದಿನಂತೆ ಸೋಮವಾರ ಬೆಳಗ್ಗೆ 8 ಗಂಟೆ ಹೊತ್ತಿಗೆ ಗಾರ್ಮೆಂಟ್ಸ್‌ಗೆ ಬಂದಾಗ ಕಂಡದ್ದು ಬರೀ ಬೂದಿ.
ಕಾರ್ಮಿಕರು ಬಂದ ಹೊತ್ತಿಗೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಇದನ್ನು ಕಂಡ ಕಾರ್ಮಿಕರು ಒಂದು ಕ್ಷಣ ಆತಂಕಕ್ಕೀಡಾಗಿದ್ದಲ್ಲದೇ, ನಡು ರಸ್ತೆಯಲ್ಲೇ ಕಣ್ಣೀರು ಸುರಿಸುತ್ತಿದ್ದ ದೃಶ್ಯ ಕಂಡು ಬಂತು. ಕೊನೆಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಮಿಕರನ್ನು ಸಮಧಾನಪಡಿಸಿ ಮನೆಗೆ ತೆರಳುವಂತೆ ಸೂಚಿಸಿದರು.