ಅಸ್ಸಾಂ: ಟ್ರಕ್ ವೊಂದರಲ್ಲಿದ್ದ 40 ಲಕ್ಷ ರೂ. ಮೌಲ್ಯದ ಅಪಾರ ಪ್ರಮಾಣದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಅಸ್ಸಾಂ-ತ್ರಿಪುರಾ ಗಡಿಯಲ್ಲಿರುವ ಕರೀಮ್‌ಗಂಜ್ ಜಿಲ್ಲೆಯಲ್ಲಿ ಸೋಮವಾರ (ಡಿ.5 ರಂದು) ನಡೆದಿದೆ.
ಚುರೈಬರಿ ಚೆಕ್ ಪೋಸ್ಟ್ ನ ಬಳಿ ಪೊಲೀಸರು ದಿನ ನಿತ್ಯದಂತೆ ವಾಹನವನ್ನು ತಪಾಸಣೆ ಮಾಡುವ ವೇಳೆ ಟ್ರಕ್ ವೊಂದನ್ನು ತಡೆದಿದ್ದಾರೆ. ಆ ಬಳಿಕ ವಾಹನವನ್ನು ತಪಾಸಣೆ ಮಾಡುವ ವೇಳೆ ಟ್ರಕ್ ನಲ್ಲಿದ್ದ ರಹಸ್ಯವಾದ ಬಾಕ್ಸ್ ವೊಂದರಲ್ಲಿ ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಭೂಕುಸಿತ ಉಂಟಾಗಿ ಮಣ್ಣಿನಡಿ ಹೂತು ಹೋದ ಬಸ್; 27 ಮಂದಿ ದುರ್ಮರಣ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
ಈ ಬಗ್ಗೆ ಮಾಹಿತಿ ನೀಡಿರುವ ಚುರೈಬರಿ ಪೊಲೀಸ್ ಅಧಿಕಾರಿ ನಿರಂಜನ್ ದಾಸ್ “ದಿನ ನಿತ್ಯದಂತೆ ವಾಹನ ತಪಾಸಣೆಯ ಸಮಯದಲ್ಲಿ, ನಾವು ಟ್ರಕ್ ವೊಂದನ್ನು ತಡೆದಿದ್ದೇವೆ. ಟ್ರಕ್ ನಲ್ಲಿ ತಪಾಸಣೆ ಮಾಡುವ ವೇಳೆ ಅದರಲ್ಲಿ ಒಂದು ರಹಸ್ಯವಾದ ಬಾಕ್ಸ್ ನಲ್ಲಿ400 ಕೆಜಿ ಗಾಂಜಾ ಪತ್ತೆಯಾಗಿದೆ. ನಾವು ಟ್ರಕ್ ಚಾಲಕನನ್ನು ಬಂಧಿಸಿದ್ದೇವೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ವಶಪಡಿಸಿಕೊಂಡ ಗಾಂಜಾದ ಮಾರುಕಟ್ಟೆ ಮೌಲ್ಯ ಸುಮಾರು 40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ” ಎಂದಿದ್ದಾರೆ.
ಟ್ರಕ್ ಚಾಲಕ ರುಬೆಲ್ ಮಿಯಾನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಲಾಗುತ್ತಿದೆ ಎಂದು ತಿಳಿದು ಬಂದಿದೆ.