Advertisement

ನಗರದಲ್ಲಿ 400ರ ಗಡಿದಾಟಿದ ಸೋಂಕು

06:12 AM Jun 04, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಬುಧವಾರ ಒಟ್ಟು 20 ಕೋವಿಡ್‌ 19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಎಲ್ಲರು ಹೊರ ರಾಜ್ಯ ದಿಂದ ಬಂದವರಾಗಿದ್ದಾರೆ. ಇವರಲ್ಲಿ 15 ಜನ ಕ್ವಾರಂಟೈನ್‌ನಲ್ಲೇ ಇದ್ದ ಹಿನ್ನೆಲೆಯಲ್ಲಿ ಇವರ ಪ್ರಾಥಮಿಕ  ಹಾಗೂ ದ್ವಿತೀಯ ಸಂಪರ್ಕಿ ತರನ್ನು ಕ್ವಾರಂಟೈನ್‌ ಮಾಡುವುದು ತಪ್ಪಿದೆ. 20 ಸೋಂಕು ಪ್ರಕರಣಗಳು ದೃಢಪಡುವ ಮೂಲಕ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 417ಕ್ಕೆ ಏರಿಕೆಯಾಗಿದೆ.

Advertisement

ನವದೆಹಲಿಯಿಂದ ಬಂದ ಎಂಟು  ಜನ, ಬಿಹಾರ ಹಾಗೂ ಮಹಾರಾಷ್ಟ್ರದಿಂದ ತಲಾ ನಾಲ್ವರು, ತಮಿಳುನಾಡಿನಿಂದ ಬಂದ ಇಬ್ಬರು ಹಾಗೂ ರಾಜಸ್ಥಾನದಿಂದ ಬಂದ ಒಬ್ಬರಿಗೆ ಬುಧವಾರ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಇವರಲ್ಲಿ ಮಹಾರಾಷ್ಟ್ರದಿಂದ ಬಂದ 4  ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿ ದ್ದು, ಉಳಿದ 15 ಜನರನ್ನು ಹೋಂ ಕ್ವಾರಂಟೈನ್‌ ಕಳಿಸಲಾಗಿತ್ತು. ಇನ್ನು ಬುಧವಾರ ಒಟ್ಟು 19 ಜನ ಗುಣಮುಖರಾಗಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಅನಂತಪುರದ ಮಹಿಳೆಗೆ ಸೋಂಕು: ಅನಂತಪುರದಿಂದ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದ 58 ವರ್ಷದ ಮಹಿಳೆಗೆ (ರೋಗಿ ಸಂಖ್ಯೆ -3863) ಬುಧವಾರ ಸೋಂಕು ದೃಢಪಟ್ಟಿದೆ. ಇವರ ಪ್ರಾಥಮಿಕ ಮತ್ತು ದ್ವಿತೀಯ  ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ ಮಾಡಲಾಗುತ್ತಿದ್ದು, ಪ್ರಕರಣ ಸಂಬಂಧ ಆಂಧ್ರಪ್ರದೇಶ ಸರ್ಕಾರಕ್ಕೂ ಮಾಹಿತಿ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದರು.

ಕಂಟೈನ್ಮೆಂಟ್‌ ಪ್ರದೇಶ 40ಕ್ಕೆ ಏರಿಕೆ: ನಗರದಲ್ಲಿ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಯಶವಂತಪುರ ದಲ್ಲಿ ಸೋಂಕು ದೃಢಪಟ್ಟ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ ಮೂರು ಮಂದಿಗೆ ಸೋಂಕು ಇರುವುದು  ಮಂಗಳವಾರ ದೃಢಪಟ್ಟ ಹಿನ್ನೆಲೆಯಲ್ಲಿ ಮಲ್ಲೇಶ್ವರ ವಾರ್ಡ್‌ ಮತ್ತು ಮಹಾರಾಷ್ಟ್ರದಿಂದ ಆಗಮಿಸಿದ ವ್ಯಕ್ತಿಗೆ ಕೋವಿಡ್‌ 19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಿ.ವಿ.ಪುರ ವಾರ್ಡ್‌ ಅನ್ನು ಕಂಟೈನ್ಮೆಂಟ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next