Advertisement

400 crores ಆನ್‌ಲೈನ್‌ ಗೇಮಿಂಗ್‌ ಆ್ಯಪ್‌ ವಂಚನೆ ಪತ್ತೆ

01:38 AM Sep 27, 2024 | Team Udayavani |

ಹೊಸದಿಲ್ಲಿ: ಆನ್‌ಲೈನ್‌ ಗೇಮಿಂಗ್‌ ವಂಚನೆ ಪ್ರಕರಣವೊಂದರ ತನಿಖೆ ಆರಂಭಿಸಿರುವ ಜಾರಿ ನಿರ್ದೇಶನಾಲಯ(ಇ.ಡಿ.)ಚೀನೀ ನಾಗರಿಕರು ಭಾಗಿಯಾಗಿರುವ ಬರೋಬ್ಬರಿ 400 ಕೋಟಿ ರೂ.ವಂಚನೆ ಪತ್ತೆಹಚ್ಚಿದೆ. ಜತೆಗೆ, ಆನ್‌ಲೈನ್‌ ಗೇಮಿಂಗ್‌ ಆ್ಯಪ್‌ ಫೈವಿನ್‌ ಜತೆ ಲಿಂಕ್‌ ಆಗಿರುವ ಹಲವು ಖಾತೆಗಳನ್ನೂ ಸ್ಥಗಿತಗೊಳಿಸಿದೆ.

Advertisement

ಒಟ್ಟಾರೆ 25 ಕೋಟಿ ರೂ. ಮೊತ್ತ ಈ ಖಾತೆಗಳಲ್ಲಿವೆ. ಪ್ರಕರಣಕ್ಕೆ ಸಂಬಂಧಿಸಿ ದಂತೆ ನಾಲ್ವರನ್ನು ಬಂಧಿಸಲಾಗಿದೆ. ಫೈವಿನ್‌ ಆ್ಯಪ್‌ ಮೂಲಕ ಬಳಕೆದಾರರಿಗೆ ಮಿನಿ ಗೇಮ್‌ ಆಡುವ ಮೂಲಕ ಹಣ ಗಳಿಸುವ ಆಮಿಷ ಒಡ್ಡಲಾಗುತ್ತಿತ್ತು. ಹೊಸಬರು ಖಾತೆ ತೆರೆದು, ಈ ಆಟ ಆಡುತ್ತಿದ್ದರು. ಗೇಮ್‌ ಆಡುತ್ತಾ ಆಡುತ್ತಾ ಬಳಕೆದಾರರ ಖಾತೆಗಳಲ್ಲಿ ಸಾಕಷ್ಟು ಮೊತ್ತ ಸಂಗ್ರಹವಾದ ಕೂಡಲೇ, ಆ್ಯಪ್‌ ಏಕಾಏಕಿ ಆ ಮೊತ್ತವನ್ನು ಬಳಕೆದಾರರಿಗೆ ವಿತ್‌ಡ್ರಾ ಮಾಡಲು ಆಗದಂತೆ ಮಾಡುತ್ತಿತ್ತು ಎಂದು ತನಿಖೆಯಲ್ಲಿ ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next