Advertisement

40 ವರ್ಷದಿಂದ ಸೌಲಭ್ಯ ಕಾಣದ ಅಟ್ಟೂರು

04:08 PM Sep 02, 2021 | Team Udayavani |

ಚಿಂತಾಮಣಿ: ಕೇವಲ ಹೆಸರಿಗಷ್ಟೇ ಗ್ರಾಮ. ಸುಮಾರು 40 ವರ್ಷದಿಂದಲೂ ಸೌಲಭ್ಯ ಮರೀಚಿಕೆ. ಮನವಿ ಸಲ್ಲಿಸಿದರೂ ಅಧಿಕಾರಿಗಳು-ಜನಪ್ರತಿನಿಧಿಗಳು ಮೌನ.

Advertisement

ಹೌದು, ತಾಲೂಕಿನ ತಳಗವಾರ ಗ್ರಾಪಂ ವ್ಯಾಪ್ತಿಯ ಅಟ್ಟೂರು ಗ್ರಾಮವನ್ನು ಅಧಿಕಾರಿಗಳು- ಜನಪ್ರತಿನಿಧಿಗಳು ನಿರ್ಲಕ್ಷ್ಯಿಸಿದ್ದು ಜನತೆ ರೋಸಿ ಹೋಗಿದ್ದಾರೆ.

ಪರಿಶಿಷ್ಟ ಜಾತಿ ಸಮುದಾಯದವರೇ ಈಗ್ರಾಮದಲ್ಲಿಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೂಲಿಯೇ ಇವರಿಗೆ ಆದಾಯದ ಮೂಲ. ಈಗಲೂ ಪಾಳು ಬಿದ್ದ, ಟಾರ್ಪಲ್‌ ಹೊದಿಸಿದ ಗುಡಿಸಲುಗಳಲ್ಲೇ ಜನತೆ ವಾಸಿಸುತ್ತಿದ್ದಾರೆ. ಗ್ರಾಪಂ ಮೂಲಕ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಈ ಗ್ರಾಮದಲ್ಲಿ ಸಮರ್ಪಕವಾಗಿ ಮನೆಗಳಿಲ್ಲ. ಸರಿಯಾದ ರಸ್ತೆ, ಕುಡಿಯಲು ಶುದ್ಧನೀರು, ವಿದ್ಯುತ್‌ ವ್ಯವಸ್ಥೆಯೂ ಇಲ್ಲದಂತಾಗಿದೆ.

ಅಟ್ಟೂರು ಗ್ರಾಮದ ಸರ್ವೆ ನಂ1ರಲ್ಲಿ 2.20 ಎಕರೆ ಸರ್ಕಾರಿ ಗೋಮಾಳವಿದ್ದು ಸದರಿ ಜಮೀನಿನಲ್ಲಿ ಸವರ್ಣೀಯರು ಸೇರಿದಂತೆ 70 ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿವೆ.ಈ ಪೈಕಿ 20-30 ಸರ್ವಣಿಯರ ಕುಟುಂಬಗಳಿಗೆ ನಿವೇಶನ ಖಾತೆಯಾಗಿ ಎಲ್ಲಾ ಸೌಲಭ್ಯಗಳು ದೊರೆಯುತ್ತಿವೆ. ಆದರೆ, ಉಳಿದ 30-40 ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ನಿವೇಶನ ಖಾತೆಯಾಗಿಲ್ಲ. ವಸತಿ ಸೌಲಭ್ಯಗಳೂ ದೊರೆತಿಲ್ಲ. ಅಷ್ಟೇ ಅಲ್ಲದೆ ಸಕ್ರಿಯವಾಗಿ ವಿದ್ಯುತ್‌ ಸಂಪರ್ಕವೂ ಇಲ್ಲದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ:ಕೆಲವು ವಾಹಿನಿ, ವೆಬ್ ಪೋರ್ಟಲ್ ಗಳಲ್ಲಿ ಹರಡುವ ಸುದ್ದಿಗಳಿಗೆ ನಿಯಂತ್ರಣವೇ ಇಲ್ಲ : ಸುಪ್ರೀಂ

Advertisement

ನಿರ್ಲಕ್ಷ್ಯ: ಇನ್ನು ಸರ್ಕಾರ ವಸತಿ ಕಲ್ಪಿಸಲು ಹತ್ತು ಹಲವುಯೋಜನೆ ರೂಪಿಸಿದ್ದರೂ ಅವುಗಳ ಜಾರಿಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರು ‌ ವುದು ಆಟ್ಟೂರು ಗ್ರಾಮದ ವ್ಯವಸ್ಥೆಗೆ ಸಾಕ್ಷಿಯಾದಂತಿದೆ.

ನರೇಗಾ ಯೋಜನೆ ವ್ಯರ್ಥ: ಕಳೆದ 40 ವರ್ಷಗಳಿಂದಲೂ ಹಳೆ ಮನೆಗಳಲ್ಲೇ ವಾಸವಿದ್ದೇವೆ. ನಮಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಯಾವ ಅಧಿಕಾರಿಯೂ ನಮ್ಮ ಊರಿಗೆ ಭೇಟಿ ನೀಡಿ ಸಮಸ್ಯೆ ಕೇಳಿಲ್ಲ. ಇನ್ನು ಜನಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಮಾತ್ರ ಬಂದು ಹೋಗುತ್ತಾರೆ.  ಸಮಸ್ಯೆಗಳ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ‌ ಮಾಡಿದರೂ ಸೌಲಭ್ಯ ಕಲ್ಪಿಸಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ಗ್ರಾಪಂ ಸದಸ್ಯನಾಗಿ 8 ತಿಂಗಳು ಆಗಿದ್ದು ಕೆಲವು ಮೂಲಭೂತ ಸೌಲಭ್ಯಕಲ್ಪಿಸಿದ್ದೇನೆ. ನನ್ನಅವಧಿಯಲ್ಲಿ ಸಂಪೂರ್ಣವಾಗಿ ರಸ್ತೆ,
ಚರಂಡಿಗಳನ್ನು ನಿರ್ಮಿಸಿಕೊಡುತ್ತೇನೆ. ಆದಷ್ಟು ಎಲ್ಲಾ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವೆ.
– ನರಸಿಂಹಮೂರ್ತಿ, ಗ್ರಾಪಂ ಸದಸ್ಯ.

ಅಟ್ಟೂರು ಗ್ರಾಮದಲ್ಲಿ ಸಮಸ್ಯೆಗಳಿರುವುದಾಗಿ ತಿಳಿದು ಬಂದಿದೆ. ಗ್ರಾಮಕ್ಕೆಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡುತ್ತೇನೆ. ಅಭಿವೃದ್ಧಿಗೆ ಕ್ರಮಕೈಗೊಳ್ಳುತ್ತೇನೆ.
-ಮಂಜುನಾಥ್‌, ತಾಪಂ ಇಒ

ಅಟ್ಟೂರು ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ, ವಸತಿ ಸೌಲಭ್ಯಇಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮ ಸದಸ್ಯರೊಂದಿಗೆ ಚರ್ಚಿಸಿ ನರೇಗಾ ಯೋಜನೆಯಡಿವಸತಿ ಸೌಲಭ್ಯಕಲ್ಪಿಸುವೆ.
– ಸುಕಾಂತ್‌, ತಳಗವಾರ ಗ್ರಾಪಂ ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next