Advertisement

300 ಕೆ.ಜಿ. ರಂಗೋಲಿಯಲ್ಲಿ ಅರಳಿದ ತ್ರಿವಣ ಧ್ವಜ

09:56 AM Jan 26, 2020 | Sriram |

ಬೆಂಗಳೂರು: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬಾಂಧವ ಸಂಸ್ಥೆ ವತಿಯಿಂದ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ 300 ಕೆ.ಜಿ.ರಂಗೋಲಿ ಪುಡಿಯಲ್ಲಿ ಸುಮಾರು 2 ಸಾವಿರ ಅಡಿಯ ಬೃಹತ್‌ ತ್ರಿವಣ ಧ್ವಜ ರಚಿಸಲಾಗಿದೆ.

Advertisement

ರಾಷ್ಟ್ರಾಭಿಮಾನದ ಸಂಕೇತವಾಗಿ ಬೃಹತ್‌ ತ್ರಿವರ್ಣ ಧ್ವಜ ರಚಿಸಿದ್ದು, ಶನಿವಾರ ಇದಕ್ಕೆ ಶಾಲಾ ಮಕ್ಕಳು, ಯುವ ಸಮೂಹ, ಬಾಂಧವ ಸಂಸ್ಥೆಯ ಸಂಸ್ಥೆಯ 40ಕ್ಕೂ ಹೆಚ್ಚು ಮಹಿಳೆಯರು ಕೇಸರಿ, ಬಿಳಿ, ಹಸಿರು ಬಣ್ಣದ ರಂಗೋಲಿಯಿಂದ ತ್ರಿವರ್ಣ ಧ್ವಜಕ್ಕೆ ಅಂತಿಮ ರೂಪ ನೀಡಿದರು. ಶಾಸಕಿ ಸೌಮ್ಯರೆಡ್ಡಿ ಕೂಡ ಈ ಕಾರ್ಯದಲ್ಲಿ ಭಾಗವಹಿಸಿದ್ದರು.

ಕಳೆದ ಐದು ವರ್ಷಗಳಿಂದ ಗಣರಾಜ್ಯೋತ್ಸವನ್ನು ಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿದೆ. ಜನ ಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ರಾಷ್ಟ್ರದ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶದಿಂದ ರಂಗೋಲಿಯಲ್ಲಿ ತ್ರಿವರ್ಣ ಧ್ವಜ ರಚಿಸಲಾಗಿದೆ ಎಂದು ಬಾಂಧವ ಸಂಸ್ಥೆಯ ಮುಖ್ಯಸ್ಥ ಎನ್‌.ನಾಗರಾಜ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next