Advertisement

40 ಸಾವಿರ ಸಸಿ ನೆಟ್ಟು ಪೋಷಿಸಿದ ಉದ್ಯೋಗ ಖಾತ್ರಿ ಕಾರ್ಮಿಕರು

06:48 PM Feb 17, 2021 | Team Udayavani |

ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ) ಕೂಲಿ ಕಾರ್ಮಿಕರು, ಬಡ ವರ್ಗದ ಜನರಿಗೆ ಉದ್ಯೋಗ ನೀಡುವುದಲ್ಲದೇ, ಹಸಿರೀಕರಣಕ್ಕೂವರದಾನವಾಗಿದೆ. ತಾಲೂಕಿನ ಹೊನ್ನಕಿರಣಗಿ ಗ್ರಾಮ ಪಂಚಾಯಿತಿ ಯೊಂದರಲ್ಲೇ  ಸುಮಾರು 40 ಸಾವಿರ ಸಸಿಗಳನ್ನು ನೆಟ್ಟುಮರಗಳನ್ನಾಗಿ ಬೆಳೆಸಿ “ಮನರೇಗಾ’ ಪೋಷಿಸುತ್ತಿದೆ.

Advertisement

ನಗರ ಪ್ರದೇಶದಿಂದ 25 ಕಿಲೋ ಮೀಟರ್‌ದೂರದ ಹೊನ್ನ ಕಿರಣಗಿ, ಫಿರೋಜಾಬಾದ್‌, ದಿನಸಿಣ್ಣೂರ ವ್ಯಾಪ್ತಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಘಟಕ ಸ್ಥಾಪನೆಗಾಗಿ 1,600 ಎಕರೆ ಭೂಮಿ ಗುರುತಿಸಲಾಗಿದೆ. ಈ ಘಟಕದವ್ಯಾಪ್ತಿಯ 21 ಕಿ.ಮೀ ಸುತ್ತಳತೆಯಲ್ಲಿ2016ರಲ್ಲಿ ಮನರೇಗಾ ಕೂಲಿ ಕಾರ್ಮಿಕರ ಮೂಲಕ ಬೇವು, ಮಾವು, ಹುಣಸಿ,ಬಸವನಪಾದ, ಆಕಾಶ ಮಲ್ಲಿಗೆ, ನೇರಳೆ,ಬಿದರು ಅರಳಿ, ಹೊಂಗೆ ಹೇಗೆ ವಿವಿಧ ಬಗೆಸಸಿಗಳನ್ನು ನೆಡಲಾಗಿದೆ. ಈಗ ಅವು 15ಅಡಿಗೂ ಹೆಚ್ಚು ಎತ್ತರ ಬೆಳೆದಿದ್ದು, ಅವುಗಳನ್ನು ಘೋಷಿಸುವ ಕೆಲಸ ಮನರೇಗಾದಡಿಯಲ್ಲೇ ಭರದಿಂದ ನಡೆಯುತ್ತಿದೆ.

ನಾಲ್ಕು ತಿಂಗಳು ನಿರಂತರ ಕೆಲಸ:

ಹಸಿರೀಕರಣವನ್ನು ಮನರೇಗಾ ಯೋಜನೆಯಲ್ಲೂ ಮಾಡಬಹುದು ಎನ್ನುವ ಪರಿಕಲ್ಪನೆ ತುಂಬಿದವರು ಐಎಎಸ್‌ ಅಧಿಕಾರಿ ಅನಿರುದ್ಧ ಶ್ರವಣ್‌. ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಅವರು ಈ ಉದ್ದೇಶಿತ ಉಷ್ಣ ವಿದ್ಯುತ್‌ಸ್ಥಾವರ ಘಟಕ ಪ್ರದೇಶದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಇಡೀ ಭೂಮಿ ಸರ್ಕಾರದ ಸ್ವಾಧೀನದಲ್ಲಿದ್ದು, ಯಾವುದೇ ಕಾಮಗಾರಿ ಆರಂಭವಾಗದ ಕಾರಣ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನುಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಕಾಂಪೌಂಡ್‌ ಪ್ರದೇಶಕ್ಕೆ ಹೊಂದಿಕೊಂಡುಮೂರು ಸಾಲುಗಳಲ್ಲಿ ಸಸಿ ನೆಡಲಾಗಿದೆ. ಅರಣ್ಯ ಇಲಾಖೆಯಿಂದ ಮೊದಲು 15 ಸಾವಿರ ಸಸಿ ಪಡೆದು ನೆಡಲಾಗಿದೆ. ಅಲ್ಲದೇ, ಪ್ರತಿ ಐದು ಮೀಟರ್‌ ಅಂತರದಲ್ಲಿ 30 ಸಾವಿರದಷ್ಟು ಬೀಜ ಬಿತ್ತಲಾಗಿದೆ. ಶೇ.80ರಷ್ಟು ಸಸಿಗಳು ಬೆಳೆದಿವೆ. ಸಸಿಗಳಿಗಾಗಿ ಗುಂಡಿ ತೋಡುವುದು ಮತ್ತು ಸಸಿಗಳನ್ನು ನೆಡುವುದು,ಬೀಜ ಬಿತ್ತುವುದರಿಂದ ಹಿಡಿದು ಪ್ರತಿಕೆಲಸವನ್ನು ಮನರೇಗಾ ಕೂಲಿ ಕಾರ್ಮಿಕರು ಮಾಡಿದ್ದಾರೆ. 2016ರಿಂದ ಇದುವರೆಗೆ ವರ್ಷದ ನಾಲ್ಕು ತಿಂಗಳು ಹಸಿರೀಕರಣದಲ್ಲೇಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಇಂಗು ಗುಂಡಿ ನಿರ್ಮಾಣ: ಹಸಿರೀಕರಣ ಕಾರ್ಯ ಆರಂಭವಾದ ವರ್ಷದಲ್ಲೇ ಮಳೆರಾಯ ಕೈಕೊಟ್ಟಿದ್ದ. ಸತತ ಮೂರು ವರ್ಷ ಬರ ಬಿದ್ದು,ಅಷ್ಟಾಗಿ ಸೌಂದರ್ಯ ಮೈದಳೆದಿರಲಿಲ್ಲ.

Advertisement

ಆದರೆ, ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಈಗ ಮರಗಳಲ್ಲಿ ಜೀವ ಕಳೆ ತುಂಬಿದೆ. ಇವುಗಳನ್ನು ನಿರಂತರವಾಗಿ ಪೋಷಿಸಬೇಕೆಂದು ಉದ್ದೇಶಿಸಿದ್ದ ಈಗ ಇಂಗು ಗುಂಡಿಗಳು ಮತ್ತು ಬದುಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. 21 ಕಿ.ಮೀ ವ್ಯಾಪ್ತಿಯಲ್ಲಿರುವ ಮರಗಳ ಮೂರು ಸಾಲಿನ ಮಧ್ಯೆ ಇಂಗು ಗುಂಡಿ ಮತ್ತುಬದು ನಿರ್ಮಿಸಲಾಗುತ್ತಿದೆ. ನಿತ್ಯ 700ಕ್ಕೂಹೆಚ್ಚು ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಇಂಗು ಗುಂಡಿ, ಬದುಗಳಿಂದ ನೀರು

ಸಂಗ್ರಹವಾಗಲಿದೆ. ಇದರಿಂದ ಬೆಳೆದುನಿಂತಿರುವ ಮರಗಳು ಪೋಷಣೆ ಕಾರ್ಯಮಾಡಲಾಗುತ್ತಿದೆ. ಹಸಿರೀಕರಣ,ಅಂತರ್ಜಲ ವೃದ್ಧಿ, ಮರ-ಗಿಡಗಳ ಬೆಳಸುವಕೆಲಸಕ್ಕೂ ಮನರೇಗಾವನ್ನು ಸಮರ್ಪಕವಾಗಿಬಳಸಿಕೊಳ್ಳಬಹುದು ಎನ್ನುವುದುನ್ನು ಇದು ನಿರೂಪಿಸಿವಂತಿದೆ.

ವಿದ್ಯಾವಂತರಿಗೂ “ಮನರೇಗಾ’ ಸೈ :

“ಮನರೇಗಾ’ ಯೋಜನೆ ವಿದ್ಯಾವಂತರ ಕೈಯನ್ನು ಹಿಡಿದಿದೆ. ಹೊನ್ನ ಕಿರಣಗಿಯಲ್ಲಿ ನಡೆಯುತ್ತಿರುವ ಇಂಗುಗುಂಡಿ ಮತ್ತು ಬದುಗಳ ನಿರ್ಮಾಣಕಾರ್ಯದ ಕೂಲಿ ಕಾರ್ಮಿಕರಲ್ಲಿ 35 ವಿದ್ಯಾವಂತರು ಸೇರಿದ್ದಾರೆ. ಬಿಎ, ಪಿಯುಸಿ, ಐಟಿಐ, ಎಸ್ಸೆಸ್ಸೆಲ್ಸಿ ಓದಿರುವಯುವಕ-ಯುವತಿಯರು ಗುದ್ದಲಿ, ಬುಟ್ಟಿಹಿಡಿದು ಬೆವರು ಸುರಿಸುತ್ತಿದ್ದಾರೆ.ಓದು ಮುಗಿದ ಬಳಿಕ ದೊಡ್ಡ ಪಟ್ಟಣಗಳಿಗೆಹೋಗುವ ಮನಸ್ಸು ಆಗಲಿಲ್ಲ. ಊರಲ್ಲೇಏನಾದರೂ ಮಾಡಿದರೆ ಆಯ್ತು ಎಂದುಉಳಿದುಕೊಂಡಿದ್ದೆವು. ಕಳೆದ ಐದುವರ್ಷಗಳಿಂದ ಮನರೇಗಾ ಕೂಲಿಯೇ ಕೈಹಿಡಿದಿದೆ ಎನ್ನುತ್ತಾರೆ ಬಿಎ ಪದವೀಧರ ಸಂತೋಷ ಕುಮಾರ ಮತ್ತು ಪಿಯುಸಿ ಓದಿರುವ ಶರಬುಲಿಂಗ.

ನಾನು ಪಿಯುಸಿ ವಿಜ್ಞಾನ ವಿಷಯದಲ್ಲಿ ಶೇ.61ರಷ್ಟು ಅಂಕದೊಂದಿಗೆ ತೇರ್ಗಡೆ ಹೊಂದಿದ್ದೇನೆ. ನನ್ನ ಪತಿ ಸಂತೋಷಕುಮಾರ ಪಿಯುಸಿ ಮತ್ತು ಐಟಿಐ ಮುಗಿಸಿದ್ದಾರೆ. ಇಬ್ಬರೂ “ಮನರೇಗಾ’ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದೇವೆ. ಬೆವರು ಸುರಿಸಿ ದುಡಿದು ತಿನ್ನಲು ನಮಗೆ ಯಾವುದೇ ಹಿಂಜರಿಕೆ ಇಲ್ಲ.ಗೊರಮ್ಮ, ಹೊನ್ನ ಕಿರಣಗಿ

ಬೆಳೆದು ನಿಂತ ಮರಗಳನ್ನು ಪೋಷಿಸುವ ನಿಟ್ಟಿನಲ್ಲಿ ಇಂಗು ಗುಂಡಿ ಮತ್ತು ಬದು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 700ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಪ್ರತಿ 20 ಕೂಲಿ ಕಾರ್ಮಿಕರಿಗೆ ಒಬ್ಬ ಕಾಯಕ ಬಂಧು ನೇಮಿಸಲಾಗಿದೆ. ಕಾಯಕ ಬಂಧುಗಳು ಇಂಗು ಗುಂಡಿ, ಬದು ಗುರುತಿಸಿ ನಂತರ ಎಲ್ಲರಂತೆ ಅವರು ದುಡಿಯಲಿದ್ದಾರೆ. –ಸದಾನಂದ, ಕ್ಷೇತ್ರ ಸಹಾಯಕ, ಮನರೇಗಾ

 ಮನರೇಗಾ ಯೋಜನೆ ಗ್ರಾಮೀಣ ಭಾಗದ ಕೃಷಿ ಕೂಲಿ ಕಾರ್ಮಿಕರ ವಲಸೆ ತಡೆಯಲು ಸಹಕಾರಿಯಾಗಿದೆ. ಹೊನ್ನ ಕಿರಣಗಿ ಗ್ರಾ.ಪಂನಡಿ ಅತಿ ಹೆಚ್ಚು ಜನರು ಇದರ ಪ್ರಯೋಜನ ಪಡೆದಿದ್ದಾರೆ. ಹಸಿರೀಕರಣ ಕಾರ್ಯವೊಂದಕ್ಕೆ ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಮಾನವ ದಿನಗಳ ಸೃಜನೆಯಾಗಿದೆ. – ಚಂದ್ರಕಾಂತ ಜೀವಣಗಿ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ

 

ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next