Advertisement

40 ಜಮ್ಮು ವಿದ್ಯಾರ್ಥಿಗಳಿಗೆ ಬಿಎಸ್‌ಎಫ್ ಭಾರತ್‌ ದರ್ಶನ್‌ ಭಾಗ್ಯ

10:23 AM Jan 22, 2019 | udayavani editorial |

ಜಮ್ಮು : ಜಮ್ಮುವಿನ ದುರ್ಗಮ ಪ್ರದೇಶಗಳ ಸುಮಾರು 40 ವಿದ್ಯಾರ್ಥಿಗಳನ್ನು ಭಾರತೀಯ ಗಡಿ ರಕ್ಷಣಾ ಪಡೆ (ಬಿಎಸ್‌ಎಫ್) ಭಾರತ್‌ ದರ್ಶನ್‌ ಪ್ರವಾಸಕ್ಕೆ ಇಂದು ಮಂಗಳವಾರ ಕರೆದೊಯ್ದಿದೆ. 

Advertisement

40 ವಿದ್ಯಾರ್ಥಿಗಳಲ್ಲಿ 22 ಹುಡುಗಿಯರು ಮತ್ತು 18 ಹುಡುಗರು ಸೇರಿದ್ದು ಇವರೆಲ್ಲ 12ರಿಂದ 17 ವರ್ಷದವರಾಗಿದ್ದಾರೆ. ಇವರೆಲ್ಲ ಸಮಾಜದ ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ. 

ಈ ಪ್ರವಾಸದಲ್ಲಿ ವಿದ್ಯಾರ್ಥಿಗಳು ಬಿಎಸ್‌ಎಫ್ ಮಹಾ ನಿರ್ದೇಶಕರೊಂದಿಗೆ ಸಂವಾದಿಸುತ್ತಾರೆ ಮತ್ತು ದಿಲ್ಲಿಯಲ್ಲಿ ರಿಪಬ್ಲಿಕ್‌ ಡೇ ಪರೇಡ್‌ ವೀಕ್ಷಿಸುತ್ತಾರೆ ಎಂದು ಅಧಿಕೃತ ವಕ್ತಾರ ತಿಳಿಸಿದ್ದಾರೆ.

ಬಿಎಸ್‌ಎಫ್ನ ಪಲೋರಾ ಪ್ರಧಾನ ಕಾರ್ಯಾಲಯದಿಂದ ಇಂದು ಮಂಗಳವಾರ ಆರಂಭಗೊಂಡ ಭಾರತ್‌ ದರ್ಶನ್‌ ಪ್ರವಾಸ ಕಾರ್ಯಕ್ರಮಕ್ಕೆ ಬಿಎಸ್‌ಎಫ್ ಇನ್ಸ್‌ಪೆಕ್ಟರ್‌ ಜನರಲ್‌ (ಜಮ್ಮು ಫ್ರಾಂಟಿಯರ್‌) ಎನ್‌ ಎಸ್‌ ಜಮ್‌ವಾಲ್‌ ಅವರು ಹಸಿರು ನಿಶಾನೆ ತೋರಿದರು. ದೇಶದ ವೈವಿಧ್ಯಮ ಸಂಸ್ಕೃತಿ ಮತ್ತು ಪರಂಪರೆಯನ್ನು ಅರಿಯುವುದಕ್ಕೆ ಜಮ್ಮು ವಿದ್ಯಾರ್ಥಿಗಳಿಗೆ ದೊರಕಿರುವ ಅಪೂರ್ವ ಅವಕಾಶ ಇದಾಗಿದೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next