ಮಂಗಳೂರು : ಬಹ್ರೈನಿಂದ 40 ಮೆಟ್ರಿಕ್ ಟನ್ ಆಮ್ಲಜನಕ ಐ ಎನ್ ಎಸ್ ತಲ್ವಾರ್ ಹಡಗು ಮೂಲಕ ಬುಧವಾರ ಮಧ್ಯಾಹ್ನ ಮಂಗಳೂರಿಗೆ ಬಂದು ತಲುಪಿದೆ.
Advertisement
ಬಹ್ರೈನ್ ನ ಮಾನಾಮಾ ಬಂದರಿನಿಂದ ಈ ಹಡಗು ಹೊರಟು 2 ಕಂಟೈನರ್ ಗಳಲ್ಲಿ 40 ಮೆಟ್ರಿಕ್ ಟನ್ ಅಮ್ಲಜನಕವನ್ನು ಹೊತ್ತು ತಂದು ಮಂಗಳೂರಿಗೆ ತಲುಪಿದೆ.
ಇಷ್ಟೆ ಅಲ್ಲದೆ ವೈದ್ಯಕೀಯ ಉಪಕರಣಗಳು ಕೂಡ ಈ ಹಡಗಿನ ಮೂಲಕ ಬಂದಿದೆ. ಸದ್ಯ 40 ಮೆ.ಟನ್ ಆಮ್ಲಜನವನ್ನು ಬಹ್ರೈನ್ ಮೂಲಕ ತರಲಾಗಿದ್ದು, ಉಳಿದಂತೆ ಸರ್ಕಾರವೇ ನೀಡಲಿದೆ ಎಂದು ತಿಳಿದು ಬಂದಿದೆ.