Advertisement

ಸುಪ್ರೀಂ ಕೋರ್ಟ್‌: 40 ಲಕ್ಷ ಪ್ರಕರಣಗಳು ಬಾಕಿ

09:17 AM Oct 03, 2019 | mahesh |

ಮಣಿಪಾಲ: ದೇಶದ ಕಾನೂನು ವ್ಯವಸ್ಥೆ ಬಲಿಷ್ಠವಾಗಿದೆ ನಿಜ. ಅದರ ಜತೆಗೆ ಅಷ್ಟೇ ಆಮೆಗತಿಯಿಂದ ಕೂಡಿದೆ. ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳು ಹಾಗೂ ಕೆಳ ನ್ಯಾಯಾಲಯಗಳಲ್ಲಿ ಹಲವು ದಶಕಗಳ ಪ್ರಕರಣಗಳು ಬಾಕಿ ಇವೆ. ಇತ್ತೀಚೆಗೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಾಧೀಶ ರಂಜನ್‌ ಗೋಗೋಯಿ ಅವರು ದೇಶದ ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸಲು ಪ್ರಧಾನಿಗಳಿಗೆ ಮನವಿ ಮಾಡಿದ್ದರು.

Advertisement

30 ಲಕ್ಷ
2015ರಲ್ಲಿ ಸುಪ್ರೀಂ ಕೋರ್ಟ್‌ ನಲ್ಲಿ ಬರೋಬ್ಬರಿ 30.93 ಲಕ್ಷ ಪ್ರಕರಣಗಳು ಇತ್ಯರ್ಥವಾಗದೇ ಇದ್ದವು. 2015ರಿಂದ 2019ರ ಈ ವರ್ಷಗಳಲ್ಲಿ 3.8 ಶೇಕಡ ಪ್ರಕರಣಗಳು ಮಾತ್ರ ಇತ್ಯರ್ಥವಾಗಿದೆ. ಈಗ ಆ ಸಂಖ್ಯೆ 31 ಲಕ್ಷಕ್ಕೆ ಏರಿಕೆಯಾಗಿದೆ.

43 ಲಕ್ಷ
ದೇಶದ 25 ಹೈಕೋರ್ಟ್‌ ಗಳಲ್ಲಿ ಸುಮಾರು 43.55 ಲಕ್ಷ ಪ್ರಕರಣಗಳು ಬಾಕಿ ಇದೆ. 8 ಲಕ್ಷ ಪ್ರಕರಣಗಳು ಸುಮಾರು ದಶಕಗಳಷ್ಟು ಹಳೆಯದು. ಇವುಗಳಲ್ಲಿ 18.75 ಲಕ್ಷ ಪ್ರಕರಣಗಳು ಸಿವಿಲ್‌ ಹಾಗೂ 12.5 ಲಕ್ಷ ಪ್ರಕರಣಗಳು ಕ್ರಿಮಿನಲ್‌ ಆಗಿದೆ.

26 ಲಕ್ಷ
ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ 43.5 ಲಕ್ಷ ಪ್ರಕರಣಗಳಲ್ಲಿ 26.76 ಲಕ್ಷ ಪ್ರಕರಣಗಳು ಇತ್ತೀಚಿನ 5 ವರ್ಷಗಳಲ್ಲಿ ದಾಖಲಾದವುಗಳಾಗಿವೆ. 8.44 ಲಕ್ಷ ಪ್ರಕರಣಗಳು 5-10 ವರ್ಷಗಳ ಹಳೆಯದು. 8.35 ಪ್ರಕರಣಗಳು ದಶಕಗಳ ಹಳೆದಾಗಿವೆ.

37 ಶೇ. ಸ್ಥಾನ ಖಾಲಿ
ಹೈಕೋರ್ಟ್‌ಗಳಲ್ಲಿ 43.5 ಲಕ್ಷ ಪ್ರಕರಣಗಳು ಬಾಕಿ ಉಳಿಯಲು ಜಡ್ಜ್ಗಳ ಕೊರತೆಯೇ ಮುಖ್ಯ ಕಾರಣ ಎಂದು ತಿಳಿದು ಬಂದಿದೆ. ವಿವಿಧ ರಾಜ್ಯಗಳಲ್ಲಿ ಸುಮಾರು 350ರಷ್ಟು ಜಡ್ಜ್ ಹುದ್ದೆ ಖಾಲಿ ಇದೆ.

Advertisement

7.26 ಲಕ್ಷ
ಉತ್ತರ ಪ್ರದೇಶದ ಅಲಹಾಬಾದ್‌ ಹೈಕೋರ್ಟ್‌ವೊಂದರಲ್ಲೇ ಸುಮಾರು 7 ಲಕ್ಷದ 26 ಸಾವಿರ ಪ್ರಕರಣಗಳು ಇನ್ನಷ್ಟೇ ಕೊನೆಗಾಣಬೇಕಿದೆ. ಇದು ದೇಶದಲ್ಲಿ ಇತ್ಯರ್ಥವಾಗದೇ ಇರುವ ಪ್ರಕರಣಗಳನ್ನು ಹೊಂದಿದ ಮೊದಲ ರಾಜ್ಯವಾಗಿದೆ. 4.49 ಸಾವಿರ ಪ್ರಕರಣಗಳ ಮೂಲಕ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ.

ಸ್ಥಳೀಯ ಕೋರ್ಟ್‌ ಗಳಲ್ಲಿ 30 ಲಕ್ಷ
ದೇಶದ ವಿವಿಧ ಸ್ಥಳೀಯ ಕೋರ್ಟ್‌ ಗಳಲ್ಲಿ ಸುಮಾರು 30 ಲಕ್ಷ ಪ್ರಕರಣಗಳು ಇತ್ಯರ್ಥ ವಾದೇ ಉಳಿದು ಕೊಂಡಿದೆ. 20.5 ಲಕ್ಷ ಪ್ರಕರಣಗಳು 2015ರ ಬಳಿಕ ದಾಖಲಾಗಿದೆ. ಇದರಲ್ಲಿ 2 ಪ್ರಕರಣಗಳು 1951ರಂದು ಎಂದು ರಾಷ್ಟ್ರೀಯ ವಾಹಿನಿಯೊಂದು ವರದಿ ಮಾಡಿತ್ತು.

ವಾರ್ಷಿಕ 13 ಲಕ್ಷ ಪ್ರಕರಣ ಇತ್ಯರ್ಥ
ಸ್ಥಳೀಯ ಕೋರ್ಟ್‌ಗಳಲ್ಲಿ ಪ್ರತಿ ವರ್ಷ 13 ಲಕ್ಷ ಪ್ರಕರಣಗಳನ್ನು ಇತ್ಯರ್ಥಮಾಡಲಾಗುತ್ತದೆ. ಆದರೆ ತ್ಯರ್ಥಗೊಂಡ ಪ್ರಕರಣಗಳಷ್ಟೇ ಸಂಖ್ಯೆಯ ಹೊಸ ದೂರುಗಳು ದಾಖಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next