Advertisement

ಕಲಬುರಗಿ: 40 ಕೆಜಿ ಗಾಂಜಾ ಪತ್ತೆ; ಆರೋಪಿಗಳ ಬಂಧನ

08:35 PM Sep 11, 2020 | mahesh |

ಕಲಬುರಗಿ: ರಾಜ್ಯದಲ್ಲೇ ದೊಡ್ಡ ಗಾಂಜಾ ಜಾಲ ಪತ್ತೆಯಾದ ಬೆನ್ನಲ್ಲೆ ಕಲಬುರಗಿ ಪೊಲೀಸರು ಮತ್ತಷ್ಟು ಅಲರ್ಟ್ ಆಗಿದ್ದಾರೆ. ಶುಕ್ರವಾರ ಗಾಂಜಾ ಬೆಳೆದ ಎರಡು ಪ್ರಕರಣಗಳು ಸೇರಿ ಐದು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು 40 ಕೆಜಿ ಗಾಂಜಾ ಜಪ್ತಿ ಮಾಡಿ, ಆರು ಆರೋಪಿಗಳನ್ನು ಬಂಧಿಸಲಾಗಿದೆ.

Advertisement

ಚಿಂಚೋಳಿ ತಾಲೂಕಿನ ಕುಂಚಾವರಂ ಗಡಿ ಪ್ರದೇಶದಲ್ಲಿ ಎರಡು ಬೇರೆ-ಬೇರೆ ಕಬ್ಬಿನ ಹೊಲದಲ್ಲಿ ಬೆಳೆದಿದ್ದ 25 ಕೆಜಿ ಮತ್ತು 13 ಕೆಜಿ ಒಣ ಮತ್ತು ಹಸಿ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಗಾಂಜಾದ ಮೌಲ್ಯದ ಮೌಲ್ಯ 2.5 ಲಕ್ಷ ರೂ. ಆಗಿದ್ದು, ಡಿವೈಎಸ್ ಪಿ ವೀರಭದ್ರಯ್ಯ ಮಾರ್ಗದರ್ಶನದಲ್ಲಿ ಚಿಂಚೋಳಿ ಸಿಪಿಐ ಮಹಾಂತೇಶ ಪಾಟೀಲ್, ಕುಂಚಾವರಂ ಪಿಎಸ್‍ಐ ಉಪೇಂದ್ರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಕಿಶನ್ ಮತ್ತು ನರಸಿಂಗ್ ಎಂಬುವವರನ್ನು ಬಂಧಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಕಲಬುರಗಿ ನಗರ ವ್ಯಾಪ್ತಿಯಲ್ಲಿ ಮಾರಾಟ ಮತ್ತು ಸಾಗಾಟ ಸಂಬಂಧ ಮೂರು ಪ್ರಕರಣಗಳಲ್ಲಿ ಒಂದೂವರೆ ಕೆಜಿಯಷ್ಟು ಗಾಂಜಾ ಜಪ್ತಿ ಮಾಡಲಾಗಿದೆ. ನಗರದ ಹಳೇ ಕೆ.ಎಸ್.ಆರ್.ಪಿ. ಕಚೇರಿ ಹತ್ತಿರ ಕಾರು ಪಾಕಿರ್ಂಗ್ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಾಪು ನಗರದ ಪವನ್ ಮಚೇಂದ್ರ ಕಾಂಬಳೆ ಎಂಬಾತನನ್ನು ಬ್ರಹ್ಮಪುರ ಪೊಲೀಸರು ಬಂಧಿಸಿ 8 ಸಾವಿರ ರೂ. ಮೌಲ್ಯದ 1,050 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.

ಗಾಂಜಾ ಮಾರಾಟದಲ್ಲಿ ತೊಡಗಿದ್ದ ಹೂವಿನ ವ್ಯಾಪಾರಿ ಶೇಖ್ ಇಕ್ಬಲ್ ಎಂಬಾತನನ್ನು ರೋಜಾ ಪೊಲೀಸರು ಬಂಧಿಸಿ, 500 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸಿಗರೇಟ್ ನಲ್ಲಿ ಗಾಂಜಾ ತುಂಬಿಕೊಂಡು ಸೇದುತ್ತಿದ್ದ ಇಬ್ಬರನ್ನು ಎಂ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next