Advertisement

50 ದೇಶಗಳಲ್ಲಿ 40 ಭಾರತೀಯರು ಸಾವು

12:49 PM Apr 27, 2020 | sudhir |

ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ಮುಂದಾಗಿದೆ. ಅದೇ ಸಂದರ್ಭದಲ್ಲಿ ಹೊಸ ಸವಾಲೊಂದು ಎದುರಾಗಿದೆ. ಐವತ್ತು ದೇಶಗಳಲ್ಲಿರುವ ಸರಿ ಸುಮಾರು 6,300 ಭಾರತೀಯರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅವರನ್ನು ಕರೆತರುವುದು ಹೇಗೆ ಎಂಬ ಚಿಂತೆ ಕಾಡ ತೊಡಗಿದೆ. ಅಲ್ಲದೆ, ಕೇವಲ 10 ದಿನಗಳ ಅವಧಿಯಲ್ಲಿ ಸೋಂಕು ತಗುಲಿದ ಭಾರತೀಯರ ಸಂಖ್ಯೆ ದ್ವಿಗುಣವಾಗಿದೆ.

Advertisement

ವಸತಿ ನಿಲಯಗಳಲ್ಲಿ ವ್ಯಾಪಿಸಿದ ಸೋಂಕು
ಸಿಂಗಾಪುರದಲ್ಲಿ ಶೇ.90ರಷ್ಟು ಭಾರತೀಯರಿಗೆ ವಸತಿ ನಿಲಯದ ಮೂಲಕವೇ ಸೋಂಕು. ಜನಸಂದಣಿ ಪ್ರದೇಶದಲ್ಲಿ ಹೆಚ್ಚಿನ ವಸತಿ ನಿಲಯಗಳು ಇರುವುದರಿಂದ ಸೋಂಕು ಬೇಗ ಹಬ್ಬುತ್ತದೆ. ಕುವೈಟ್‌, ಬಹರೈನ್‌, ಒಮಾನ್‌, ಕತಾರ್‌, ಸೌದಿ ಅರೇಬಿಯಾ, ಯುಎಇ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಸುಮಾರು 2 ಸಾವಿರ ಭಾರತೀಯರಿಗೆ ಸೋಂಕು. ಇರಾನ್‌ನಲ್ಲಿರುವ 100ಕ್ಕೂ ಅಧಿಕ ಮಂದಿ ಭಾರತೀಯರಿಗೆ ಕೊರೊನಾ ದೃಢ.

10ದಿನದಲ್ಲಿ ದುಪ್ಪಟ್ಟು
6,300: ವಿದೇಶದಲ್ಲಿರುವ ಒಟ್ಟು ಭಾರತೀಯರಿಗೆ ಸೋಂಕು?

3,336 ; ಎ.16ರಂದು ಇದ್ದ ಪ್ರಕರಣ

40: ಸೋಂಕಿಗೆ ಎಷ್ಟು ಭಾರತೀಯರು ಬಲಿ

Advertisement

25 ; ಎ.16ರಂದು ಇದ್ದ ಮೃತರ ಸಂಖ್ಯೆ

50 ; ಕ್ಕೂ ಹೆಚ್ಚು ದೇಶಗಳಲ್ಲಿ ಸೋಂಕಿತ ಭಾರತೀಯರು

ಎಕ್ಸಿಟ್‌ ಪ್ಲಾನ್‌ ರೆಡಿ
ವಿದೇಶಗಳಲ್ಲಿರುವ ಭಾರತೀಯರನ್ನು ಕರೆತರುವ ವಿಸ್ತೃತ ಯೋಜನೆಯನ್ನು ವಿದೇಶಾಂಗ ಸಚಿವಾಲಯ ಸಿದ್ಧಪಡಿಸಿದೆ. ಯಾವ ಯಾವ ದೇಶದಿಂದ, ಎಷ್ಟು ವಿಮಾನಗಳನ್ನು ಕಳಿಸಿ, ಭಾರತೀಯರನ್ನು ಹೇಗೆ ವಾಪಸ್‌ ಕರೆತರಬೇಕು ಎಂಬ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್‌ ಶೃಂಗ್ಲಾ ಯೋಜನೆ ರೂಪಿಸಿ¨ªಾರೆ. ಕೋವಿಡ್ ನೆಗೆಟಿವ್‌ ಎಂಬ ಪ್ರಮಾಣಪತ್ರ ಇದ್ದವರನ್ನಷ್ಟೇ ದೇಶಕ್ಕೆ ಕರೆಸಿಕೊಳ್ಳಲಾಗುತ್ತದೆ ಎನ್ನಲಾಗಿದೆ. ಈ ಸಂಪೂರ್ಣ ಎಕ್ಸಿಟ್‌ ಪ್ಲಾನ್‌ ಗೆ ಸಂಬಂಧಿಸಿದ ಮಾಹಿತಿಯನ್ನು ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ನೇತೃತ್ವದ ಸಭೆಯಲ್ಲಿ ಚರ್ಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next