Advertisement
ವಿರೋಧಪಕ್ಷದ ನಾಯಕರು ನೀಡಿರುವ ನೋಟಿಸ್ ನಿಲುವಳಿ ಸೂಚನೆಯಡಿ ಬರುವುದಿಲ್ಲ. ಹೀಗಾಗಿ ತಿರಸ್ಕಾರ ಮಾಡಲಾಗಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರಕಟಿಸಿ, ಬೇರೆ ಯಾವುದಾದರೂ ರೀತಿಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. ನಿಲುವಳಿ ಸೂಚನೆಯಡಿ ಬರುವುದಿಲ್ಲ ಎಂದರು.
Related Articles
Advertisement
ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕರು ಪ್ರಸ್ತಾಪ ಮಾಡಲು ಹೊರಟಿರುವ ವಿಚಾರ ಗಂಭೀರವಾದುದು, ಭ್ರಷ್ಟಾಚಾರ ಎಂಬುದು ನಿನ್ನೆಮೊನ್ನೆಯದಲ್ಲ. ಬೇರೆ ಬೇರೆ ರೂಪದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಬಂದಿದೆ. ಚರ್ಚೆಗೆ ಎಲ್ಲರೂ ಸಿದ್ದರಿರಬೇಕು. ಭ್ರಷ್ಟಾಚಾರವನ್ನು ಯಾವ ರೀತಿ ನಿಗ್ರಹಿಸಬೇಕು ಎಂದರು. ಭ್ರಷ್ಟಾಚಾರದ ವಿಚಾರದಲ್ಲಿ ಚರ್ಚೆಗೆ ಸರ್ಕಾರ ಸಿದ್ದವಿದೆ. ಸಮಯ ನಿಗದಿ ಮಾಡಿ ಚರ್ಚೆಗೆ ಅವಕಾಶ ಮಾಡಿಕೊಡಿ ಅಭ್ಯಂತರವಿಲ್ಲ ಎಂದು ಹೇಳಿದರು.
ಸಭಾಧ್ಯಕ್ಷರು ಮಾತನಾಡಿ, ಪಿ.ರಾಜೀವ್ ಅವರು ನೋಟಿಸ್ ನೀಡಿದ್ದು, 2013ರಿಂದ 2018ರ ನಡುವೆ ಆಗಿರುವ ಹಗರಣ, ಭ್ರಷ್ಟಾಚಾರದ ಬಗ್ಗೆ ಚರ್ಚೆಯಾಗಬೇಕೆಂದು ನೋಟಿಸ್ ಕೊಟ್ಟಿದ್ದಾರೆ. ಅವರು ನೀಡಿರುವ ಮತ್ತು ವಿರೋಧ ಪಕ್ಷದವರು ನೀಡಿರುವ ನೋಟಿಸ್ ಎರಡನ್ನು ಸೇರಿಸಿ ನಿಯಮ 69ರಡಿ ಚರ್ಚೆಗೆ ಅವಕಾಶ ಕೊಡುವುದಾಗಿ ತಿಳಿಸಿದರು.
ಈ ಹಂತದಲ್ಲಿ ಸಿದ್ದರಾಮಯ್ಯ, ನಮ್ಮ ಅವ ಅಷ್ಟೇ ಅಲ್ಲ ಕಳೆದ 2006ರಿಂದ ಏನೇನು ಆಗಿದೆ, ಅಕ್ರಮ, ಹಗರಣದ ಬಗ್ಗೆಯೂ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಂದರು.