ಆಸ್ಪತ್ರೆಗೆ ಸಂಪರ್ಕಿಸಿ ಚಿಕಿತ್ಸೆ ಕೊಡಿಸಲು ಮುಂದಾದರು. ಇನ್ನೂ ಕೆಲವು ಮಕ್ಕಳ ಪಾಲಕರು ದಿನದ ಕೆಲಸದ ಮೇಲೆ ಹೊರಗಡೆ ಹೋಗಿದ್ದರಿಂದ ಅಸ್ವಸ್ಥ ಮಕ್ಕಳು ಮನೆ ಬಾಗಿಲಿಗೆ ಮಲಗಿದ್ದಾರೆ. ಇದನ್ನು ಗಮನಿಸಿದ ಬಡಾವಣೆ ಜನರು 108 ಆಂಬ್ಯುಲೆನ್ಸ್ ಮೂಲಕ ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಡಾ| ವಿಜಯಲಕ್ಷ್ಮೀ ಹಜೇರಿ, ಡಾ| ಎಂ.ಬಿ. ಸೀಂಗಲ್ ಮತ್ತು ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಇನ್ನೂ ಕೆಲ ಅಸ್ವಸ್ಥ ಮಕ್ಕಳು ಚೋಕ್ಕಾವಿಯಲ್ಲೇ ಉಳಿದಿದ್ದು ತಾಲೂಕು ವೈದ್ಯಾಧಿಕಾರಿ ಡಾ| ಸತೀಶ ತಿವಾರಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ| ಸಂಪತ್ತಕುಮಾರ ಗುಣಾರಿ ತಮ್ಮ ತಂಡದೊಂದಿಗೆ ಗ್ರಾಮಕ್ಕೆ ತೆರಳಿ ಎಲ್ಲ ಮಕ್ಕಳಿಗೆ ಚಿಕಿತ್ಸೆ ನೀಡಿದಾರೆ. ಪಾಲಕರ ಆಕ್ರೋಶ: ಆನೆಕಾಲು ಮಾತ್ರೆ ನುಂಗಿ ನಮ್ಮ ಮಕ್ಕಳು ಅಸ್ವಸ್ಥರಾಗಿದ್ದು ಹೆಚ್ಚು ಕಮ್ಮಿಯಾದರೆ ಯಾರು ಹೊಣೆ. ಇಂತಹ ಮಾತ್ರೆಗಳನ್ನು ಮಕ್ಕಳಿಗೆ ನುಂಗಿಸುವುದು ತರವಲ್ಲ ಎಂದು ಪಾಲಕರು ಹರಿಹಾಯ್ದರು. ಈ ವೇಳೆ ಡಾ|ಸತೀಶ ತಿವಾರಿ ಮಕ್ಕಳ ಜೀವಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಪಾಲಕ ಮತ್ತು ಗ್ರಾಮಸ್ಥರಿಗೆ ಸಮಾಧಾನ ಮಾಡಿದರು.
Advertisement