ಮುಂಬೈ: ಆನ್ ಲೈನ್ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಅದಕ್ಕೆ ಪೂರಕ ಎಂಬಂತೆ ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಮತ್ತು Pan ವಿವರಗಳನ್ನು ಅಪ್ ಡೇಟ್ ಮಾಡಿ ಎಂಬ ನಕಲಿ ಸಂದೇಶದ ಲಿಂಕ್ ಅನ್ನು ಕ್ಲಿಕ್ ಮಾಡಿದ ಪರಿಣಾಮ ಕಳೆದ ಮೂರು ದಿನಗಳಲ್ಲಿ ಮುಂಬೈನ ಖಾಸಗಿ ಬ್ಯಾಂಕ್ ನ ಸುಮಾರು 40 ಗ್ರಾಹಕರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ:
ಬ್ಯಾಂಕ್ ಗ್ರಾಹಕರನ್ನು ಗುರುತಿಸುವ ನಿಟ್ಟಿನಲ್ಲಿ “ಕೆವೈಸಿ”(Know Your Customer) ಪ್ರಕ್ರಿಯೆ ಕಡ್ಡಾಯವಾಗಿರುತ್ತದೆ. ಹಾಗೇ ಆನ್ ಲೈನ್ ವಂಚನೆ ಜಾಲದ ಖದೀಮರು ಕಳುಹಿಸಿದ ನಕಲಿ ಸಂದೇಶವನ್ನು ಕ್ಲಿಕ್ ಮಾಡಿ ಖಾಸಗಿ ಬ್ಯಾಂಕ್ ನ 40 ಗ್ರಾಹಕರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.
ಕಿರುತೆರೆ ನಟಿ ಶ್ವೇತಾ ಮೆನನ್ ಸೇರಿದಂತೆ 40 ಮಂದಿ ಗ್ರಾಹಕರು ವಂಚನೆಗೊಳಗಾಗಿದ್ದಾರೆಂದು ವರದಿ ತಿಳಿಸಿದೆ. ಶ್ವೇತಾ ಮೆನನ್ ನೀಡಿರುವ ದೂರಿನ ಪ್ರಕಾರ, ಕಳೆದ ಗುರುವಾರ ಬಂದ ಸಂದೇಶ ಬ್ಯಾಂಕ್ ನದ್ದೇ ಎಂದು ತಿಳಿದುಕೊಂಡು ಬ್ಯಾಂಕ್ ಪೋರ್ಟಲ್ ನಲ್ಲಿ ತನ್ನ ಕಸ್ಟಮರ್ ಐಡಿ, ಪಾಸ್ ವರ್ಸ್ ಮತ್ತು ಒಟಿಪಿಯನ್ನು ಅಪ್ ಡೇಟ್ ಮಾಡಿರುವುದಾಗಿ ತಿಳಿಸಿದ್ದಾರೆ.
Related Articles
ಬಳಿಕ ಮಹಿಳೆಯೊಬ್ಬಾಕೆ ಬ್ಯಾಂಕ್ ಅಧಿಕಾರಿ ಎಂದು ಹೇಳಿ ಫೋನ್ ಕರೆ ಮಾಡಿದ್ದು, ಮೊಬೈಲ್ ಗೆ ಬರುವ ಮತ್ತೊಂದು ಒಟಿಪಿ ಸಂಖ್ಯೆಯನ್ನು ಹೇಳುವಂತೆ ತಿಳಿಸಿದ್ದಳು. ಅದರ ಪರಿಣಾಮ ತಕ್ಷಣವೇ 57,636 ರೂಪಾಯಿ ತನ್ನ ಖಾತೆಯಿಂದ ಡೆಬಿಟ್ ಆಗಿತ್ತು. ಆಗ ತಾನು ವಂಚನೆಗೊಳಗಾಗಿರುವುದು ಮನವರಿಕೆಯಾಗಿರುವುದಾಗಿ ಮೆನನ್ ತಿಳಿಸಿದ್ದಾರೆ.
“ಬ್ಯಾಂಕ್ ಗ್ರಾಹಕರ ಗೌಪ್ಯ ವಿವರಗಳನ್ನು ಕೇಳುವ ಇಂತಹ ನಕಲಿ ಸಂದೇಶಗಳನ್ನು ಕ್ಲಿಕ್ಕಿಸದಂತೆ ಮುಂಬೈ ಪೊಲೀಸರು ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.” ಆದರೂ ಇಂತಹ ನಕಲಿ ಸಂದೇಶಗಳಿಂದ ವಂಚನೆಗೊಳಗಾಗುತ್ತಿರುವವರ ಸಂಖ್ಯೆ ಮುಂದುವರಿದಿದೆ ಎಂದು ವರದಿ ವಿವರಿಸಿದೆ.