Advertisement

40 ರ ಹರೆಯದಲ್ಲೂ ಕಮಾಲ್: 16 ವರ್ಷಗಳ ನಂತರ ಟಿಟಿ ಸಿಂಗಲ್ಸ್ ಚಿನ್ನ ಗೆದ್ದ ಶರತ್

07:49 PM Aug 08, 2022 | Team Udayavani |

ಬರ್ಮಿಂಗ್ ಹ್ಯಾಮ್ : ಸೋಮವಾರ ಇಲ್ಲಿ ನಡೆದ ಪುರುಷರ ಟೇಬಲ್ ಟೆನಿಸ್ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ 40 ರ ಹರೆಯದ ಅನುಭವಿ ಆಟಗಾರ ಅಚಂತಾ ಶರತ್ ಕಮಲ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ತೋರಿದರು.

Advertisement

ಶರತ್ 11-13, 11-7, 11-2, 11-6, 11-8 ಪಾಯಿಂಟ್ ಗಳಲ್ಲಿ ರಲ್ಲಿ ಇಂಗ್ಲೆಂಡ್‌ನ ಲಿಯಾಮ್ ಪಿಚ್‌ಫೋರ್ಡ್ ಅವರನ್ನು ಸೋಲಿಸಿ ಈ ಬಾರಿಯ ಗೇಮ್ಸ್ ನಲ್ಲಿ ಮೂರನೇ ಚಿನ್ನದ ಪದಕ ಗೆದ್ದರು. 2006 ರಲ್ಲಿ ಮೊದಲ ಬಾರಿಗೆ ಸಿಂಗಲ್ಸ್ ಚಿನ್ನ ಗೆದ್ದಿದ್ದ ಶರತ್,16 ವರ್ಷಗಳ ನಂತರ ಮತ್ತೆ ಗೆದ್ದು ಬಂಗಾರದ ಪದಕ ತನ್ನದಾಗಿಸಿಕೊಂಡರು.

ಶ್ರೀಜಾ ಅಕುಲಾ ಅವರೊಂದಿಗೆ ಮಿಶ್ರ ಡಬಲ್ಸ್ ಮತ್ತು ಸುಭಜಿತ್ ಸಹಾ ಅವರೊಂದಿಗೆ ಡಬಲ್ಸ್ ಈವೆಂಟ್‌ನಲ್ಲಿ ಈಗಾಗಲೇ ಎರಡು ಚಿನ್ನವನ್ನು ಗೆದ್ದಿದ್ದರು. ಐದು ಕಾಮನ್‌ವೆಲ್ತ್ ಗೇಮ್ಸ್‌ ಆಟಗಳಲ್ಲಿ ತಮ್ಮ ಪದಕಗಳ ಸಂಖ್ಯೆಯನ್ನು 13 ಕ್ಕೆ ಹೆಚ್ಚಿಸಿಕೊಂಡರು.

ತಮಿಳುನಾಡಿನ ಚೆನ್ನೈನಲ್ಲಿ ಹುಟ್ಟಿ ಬೆಳೆದ ಸಾಧಕ ಶರತ್ ಅವರಿಗೆ  ಕೇಂದ್ರ ಸರಕಾರ ಕ್ರೀಡಾ ರಂಗದ ಸಾಧನೆಗಾಗಿ 2004 ರಲ್ಲಿ ಅರ್ಜುನ ಪ್ರಶಸ್ತಿ,2019 ರಲ್ಲಿ ಪದ್ಮಶ್ರೀ ನೀಡಿ ಗೌರವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next