ಹೈದರಾಬಾದ್ : ಬೀದಿ ನಾಯಿಗಳ ದಾಳಿಗೆ ನಾಲ್ಕು ವರ್ಷದ ಬಾಲಕನೊಬ್ಬ ಬಲಿಯಾದ ಹೃದಯ ವಿದ್ರಾವಕ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್ ನಲ್ಲಿರುವ ವಸತಿ ಸಮುಚ್ಚಯದ ಬಳಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕನ ಮೇಲೆ ಅಲ್ಲಿದ್ದ ಮೂರು ನಾಲ್ಕು ಬೀದಿ ನಾಯಿಗಳು ದಾಳಿ ಮಾಡಿವೆ ಗಂಭೀರ ಗಾಯಗೊಂಡಿದ್ದ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಬೀದಿ ನಾಯಿಗಳ ದಾಳಿಯ ವಿಡಿಯೋ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಕುರಿತು ಮಾತನಾಡಿದ ಬಾಲಕನ ತಂದೆ ಮನೆಯ ಬಳಿಯೇ ಆಟವಾಡುತ್ತಿದ್ದ ಮಗ, ಸ್ವಲ್ಪ ಸಮಯದ ಬಳಿಕ ಮಗನ ಕಿರುಚಾಟ ಕೇಳಿದೆ ಕೂಡಲೇ ಮನೆಯಿಂದ ಹೊರಗೆ ಬಂದು ನೋಡಿದಾಗ ಬೀದಿ ನಾಯಿಗಳು ಮಗನ ಮೇಲೆ ದಾಳಿ ನಡೆಸುತ್ತಿರುವುದು ಕಂಡಿತು, ಕೂಡಲೇ ನಾಯಿ ದಾಳಿಯಿಂದ ಮಗನನ್ನು ರಕ್ಷಿಸಿ ಆಸ್ಪತ್ರೆಗೆ ಕೊಡೊಯ್ಯುವ ವೇಳೆ ಮಗ ಕೊನೆಯುಸಿರೆಳೆದಿದ್ದ ಎಂದು ಹೇಳಿದರು.
Related Articles
ಇದನ್ನೂ ಓದಿ: ವರದಕ್ಷಿಣೆಗೆ ಹಳೆಯ ಪೀಠೋಪಕರಣ ನೀಡಿದರೆಂದು ಮದುವೆಯನ್ನೇ ಮುರಿದ ವರ