ರಬಕವಿ-ಬನಹಟ್ಟಿ: ನಾಲ್ಕು ವರ್ಷದ ಹಿಂದೆ ಬಸ್ ಢಿಕ್ಕಿ ಹೊಡೆದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡದೆ ಸತಾಯಿಸಿದ ಹಿನ್ನೆಲೆ ಸಾರಿಗೆ ಇಲಾಖೆ ಬಸ್ ಜಪ್ತಿ ಮಾಡಿದ ಘಟನೆ ಬನಹಟ್ಟಿ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದೆ.
ವ್ಯಕ್ತಿ ಸಾವಿಗೆ 13.58 ಲಕ್ಷ ರೂ. ಹಾಗೂ ಶೇ.7.5 ರಷ್ಟು ಬಡ್ಡಿಪರಿಹಾರ ನೀಡದೆ ಸತಾಯಿಸಿದ ಸಾರಿಗೆ ಇಲಾಖೆ ಬಸ್‌ನ್ನು ಬನಹಟ್ಟಿ ಬಸ್ ನಿಲ್ದಾಣದಲ್ಲಿ ಸವದತ್ತಿ ಡಿಪೋಗೆ ಸೇರಿದ ಬಸ್ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ:ಕಲುಷಿತ ಆಹಾರ ಸೇವನೆ: 42 ಜನ ಅಸ್ವಸ್ಥ
ಪ್ರಕರಣದ ಹಿನ್ನಲೆ
2018 ಎ. 4 ರಂದು ರಬಕವಿ ಪಟ್ಟಣದೊಳಗಿನ ವೀರಭದ್ರೇಶ್ವರ ದೇವಸ್ಥಾನ ಹತ್ತಿರ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಉಮೇಶ ಇಮಡಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ಪರಿಹಾರವಾಗಿ 13.58 ಲಕ್ಷ ರೂ. ಹಾಗು 7.5 ಶೇ.ಬಡ್ಡಿಯಂತೆ ಪರಿಹಾರ ನೀಡಬೇಕೆಂದು 2019 ಅ. 28 ರಂದು ಬನಹಟ್ಟಿಯ ಹಿರಿಯ ಶ್ರೇಣಿ ನ್ಯಾಯಾಲಯವು ಆದೇಶ ನೀಡಿತ್ತು.
ಪರಿಹಾರ ನೀಡುವಲ್ಲಿ ವಿಳಂಬವಾದ ಕಾರಣ ಮೃತರ ಕುಟುಂಬವು ನ್ಯಾಯಾಲಯದ ಮೊರೆ ಹೋದ ಹಿನ್ನಲೆ ಬಸ್ ಜಪ್ತಿಗೆ ಆದೇಶಿಸಿದೆ.