Advertisement

4 ಕಡೆ ಕಂಠೀರವ ಮಾದರಿ ಕ್ರೀಡಾಂಗಣ

12:15 PM Oct 21, 2018 | |

ಬೆಂಗಳೂರು: 2018-19ನೇ ಸಾಲಿನ ಬಜೆಟ್‌ನಲ್ಲಿ ಕಂಠೀರವ ಕ್ರೀಡಾಂಗಣ ಮಾದರಿಯಲ್ಲೇ ನಗರದ ನಾಲ್ಕು ಕಡೆ ಕ್ರೀಡಾಂಗಣ ನಿರ್ಮಿಸಲು 17 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದ್ದು, ಸದ್ಯದಲ್ಲೇ ನಿರ್ಮಾಣದ ಕಾರ್ಯ ಆರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

Advertisement

ಕಂಠೀರವ ಕ್ರೀಡಾಂಗಣದಲ್ಲಿ ನವೀಕರಣಗೊಂಡ ಒಳಾಂಗಣ ಬಾಸ್ಕೆಟ್‌ಬಾಲ್‌ ಕೋರ್ಟ್‌ ಅನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ದೇವನಹಳ್ಳಿ, ತಾವರೆಕೆರೆ, ಗುಂಜೂರು ಮತ್ತು ಎಚ್‌.ಎಸ್‌.ಆರ್‌ ಲೇಔಟ್‌ನಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಕಂಠೀರವ ಕ್ರೀಡಾಂಗಣ ಅಭಿವೃದ್ಧಿ: ಕಂಠೀರವ ಕ್ರೀಡಾ ಸಂಕೀರ್ಣವನ್ನು ಅಭಿವೃದ್ಧಿ ಪಡಿಸಲು ಹಲವು ರೂಪರೇಷಗಳನ್ನು ಸಿದ್ಧ ಪಡಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಭೇಟಿ ನೀಡುವ ಹಿನ್ನೆಲೆಯಲ್ಲಿ ಕ್ರೀಡಾಂಗಣದೊಳಗಿನ ಶೌಚಾಲಯ ಮರು ನಿರ್ಮಾಣಕ್ಕೆ ಕಾರ್ಯಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ 2 ಕೋಟಿ ರೂ. ಹಣ ವೆಚ್ಚ ಮಾಡಲಾಗಿದೆ.

10 ವರ್ಷ ಹಳೆಯದಾಗಿರುವ ಸಿಂಥೆಟಿಕ್‌ ಟ್ರ್ಯಾಕ್‌ ಮೇಲ್ದರ್ಜೆಗೇರಿಸಲು 3.5 ಕೋಟಿ ರೂ.ಗಳಿಗೆ ಟೆಂಡರ್‌ ಕರೆಯಲಾಗಿದ್ದು, ಒಂದು ತಿಂಗಳೊಳಗಾಗಿ ಕೆಲಸ ಪ್ರಾರಂಭವಾಗಲಿದೆ ಎಂದು ವಿವರಿಸಿದರು. ಕಂಠೀರವ ಕ್ರೀಡಾಂಗಣವನ್ನು 5.77 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದ್ದು, ಇದರ ಭಾಗವಾಗಿ ಮೂರು ಬಾಸ್ಕೆಟ್‌ ಬಾಲ್‌ ಕೋರ್ಟ್‌ಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೇಲ್ದರ್ಜೆಗೆ ಏರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಹೈಟೆಕ್‌ ಜಿಮ್‌: ಕ್ರೀಡಾಪಟುಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 2 ಕೋಟಿ ರೂ. ವೆಚ್ಚದಲ್ಲಿ ಕಂಠೀರವ ಕ್ರೀಡಾಂಗಣದ ಒಳಭಾಗದಲ್ಲಿ ಹೈಟೆಕ್‌ ಜಿಮ್‌ ತೆರೆಯಲಾಗುವುದು. ವಿದೇಶಿ ಜಿಮ್‌ ಪರಿಕರಗಳು ಇಲ್ಲಿರಲಿದ್ದು, ಅಥ್ಲೆàಟಿಕ್‌ಗಳು ಇದರ ಪ್ರಯೋಜನೆ ಪಡೆಯಬಹುದಾಗಿದೆ ಎಂದರು.

Advertisement

ಕೆಲವು ಸಲ ಕ್ರೀಡಾಪಟುಗಳು ಅಭ್ಯಾಸದ ವೇಳೆ ಗಾಯಾಳುಗಳಾಗುತ್ತಾರೆ. ಇದನ್ನು ಗಂಭೀರವಾಗಿವಾಗಿ ಪರಿಗಣಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ನ್ಪೋರ್ಟ್ಸ್ ಮೆಡಿಸಿನ್‌ ಸೆಂಟರ್‌ ಸ್ಥಾಪನೆ ಮಾಡಲಾಗುವುದು. ಪ್ರಥಮ ಬಾರಿಗೆ ರಾಜ್ಯ ಸರ್ಕಾರ ಇಂತಹ ಪ್ರಯತ್ನಕ್ಕೆ ಮುಂದಾಗಿದ್ದು, ತಜ್ಞ ವೈದ್ಯರು ಕ್ರೀಡಾಪಟುಗಳನ್ನು ಆರೈಕೆ ಮಾಡಲಿದ್ದಾರೆ ಎಂದು ಹೇಳಿದರು.

ಫೀಬಾ ಏಷ್ಯಾ ಕಪ್‌ ಅ.28ಕ್ಕೆ: ಅ.28ರಿಂದ ನ.3ರವರೆಗೆ ನವೀಕೃತ ಬಾಸ್ಕೆಟ್‌ಬಾಲ್‌ ಕ್ರೀಡಾಂಗಣದಲ್ಲಿ 18 ವರ್ಷದೊಳಗಿನ ಮಹಿಳೆಯರ ಫೀಬಾ ಏಷಿಯನ್‌ ಬಾಸ್ಕೆಟ್‌ ಬಾಲ್‌ ಪಂದ್ಯಾವಳಿ ನಡೆಯಲಿದ್ದು, ಇದರ ಉದ್ಘಾಟನೆ 27ರಂದು ಖಾಸಗಿ ಹೋಟೆಲ್‌ನಲ್ಲಿ ಸಂಜೆ 6.30ಕ್ಕೆ ನೆರವೇರಲಿದೆ. ರಾಜ್ಯಪಾಲರು ಸಮಾರಂಭಕ್ಕೆ ಚಾಲನೆ ನೀಡಲಿದ್ದು, ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಮಲೇಷಿಯಾ, ಚೀನಾ, ಕಜೇಕಿಸ್ತಾನ್‌, ಇರಾನ್‌ ಸೇರಿದಂತೆ 16 ದೇಶಗಳ ತಂಡಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು. 

ಬೆಂಗಳೂರಿನಲ್ಲಿ ಆಯೋಜಿಸಿದರೆ ಸಹಕಾರ: ಪ್ರೋ ಕಬಡ್ಡಿ ಬೆಂಗಳೂರಿನಿಂದ ಬೇರೆ ಪ್ರದೇಶಗಳಿಗೆ ಸ್ಥಳಾಂತರವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಬೆಂಗಳೂರಿನಲ್ಲಿ ನಡೆಯದೇ ಇರುವುದಕ್ಕೆ  ಕಾರಣಗಳೇ ಇಲ್ಲ. ಆಯೋಜಕರು ತಮಗೆ ಎಲ್ಲಿ ಅನುಕೂಲವಾಗುತ್ತದೋ ಅಲ್ಲಿ ಆಯೋಜಿಸುತ್ತಾರೆ. ಬೆಂಗಳೂರಿನಲ್ಲಿ ಪ್ರೋ ಕಬಡ್ಡಿ ಆಯೋಜನೆ ಮಾಡುವ ಕುರಿತು ಇದುವರೆಗೂ ಯುವಜನ ಮತ್ತು ಕ್ರೀಡಾ ಇಲಾಖೆಯನ್ನು ಆಯೋಜಕರು ಸಂಪರ್ಕಿಸಿಲ್ಲ ಎಂದರು.

ಡಿಕೆಶಿ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ: ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಸಂಬಂಧಿಸಿದೆ ಸಚಿವ ಡಿ.ಕೆ.ಶಿವಕುಮಾರ್‌ ಅವರು ಯಾವ ಕಾರಣಕ್ಕೆ ಆ ರೀತಿ ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಕಾಂಗ್ರೆಸ್‌ ಪಕ್ಷಕ್ಕೂ ಧರ್ಮ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಸ್ಪಷ್ಟಪಡಿಸಿದ್ದೆ.

ಅದೇ ಮಾತನ್ನು ಈಗಲೂ ಹೇಳಬಯಸುತ್ತೇನೆ. ಪ್ರತ್ಯೇಕ ಲಿಂಗಾಯಿತ ಧರ್ಮದ ವಿಚಾರವಾಗಿ ಡಿ.ಕೆ.ಶಿವಕುಮಾರ್‌ ಅಥವಾ ಎಂ.ಬಿ.ಪಾಟೀಲ್‌ ಅವರು ಏನು ಹೇಳಿದ್ದಾರೆ ಎಂಬುವುದು ತಿಳಿದಿಲ್ಲ. ಈ ಬಗ್ಗೆ ಇಬ್ಬರೂ ನಾಯಕರನ್ನು ತಾವು ಸಂಪರ್ಕಿಸಿಲ್ಲ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next