ಪ್ರಸ್ತಾವನೆಗಳನ್ನು ಕೇಂದ್ರದ ಮುಂದಿಟ್ಟಿದ್ದಾರೆ.
Advertisement
ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರ ರಾಜ್ಯದ ರಸ್ತೆ ಅಭಿವೃದಿಟಛಿಗೆ ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ಮತ್ತಷ್ಟುಯೋಜನೆಗಳನ್ನು ಹಮ್ಮಿಕೊಳ್ಳಲು ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಿದರು.
Related Articles
Advertisement
ನಾಲ್ಕು ಪ್ರಸ್ತಾವನೆಗಳು1. ನಿರ್ಮಾಣ-ನಿರ್ವಹಣೆ-ವರ್ಗಾವಣೆ (ಬಿಓಟಿ) ಆಧಾರದ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೆಲಮಂಗಲ-ಹಾಸನ ಮಧ್ಯೆ ನಾಲ್ಕು ಪಥದ ಟೋಲ್ ರಸ್ತೆ ನಿರ್ಮಿಸುತ್ತಿದೆ. ಈ ರಸ್ತೆಯಲ್ಲಿ ಹಾಸನ ಮತ್ತು ಚನ್ನರಾಯಪಟ್ಟಣ ಬೈಪಾಸ್‌ನಲ್ಲಿ ಯಾವುದೇ ಗ್ರೇಡ್ ಸಪರೇಟರ್‌ಗಳಿಲ್ಲದ ಎರಡುಪಥದ ಕ್ಯಾರಿಯೇಜ್ ವೇ ನಿರ್ಮಾಣ ಮಾಡುತ್ತಿದೆ. ಇದರಿಂದ ಸಾಕಷ್ಟು ಸಮಸ್ಯೆಗಳ ಜತೆಗೆ ಅಪಘಾತಗಳೂ ಸಂಭವಿಸುತ್ತಿವೆ. ಆದ್ದರಿಂದ ಬೈಪಾಸ್‌ಗಳಲ್ಲಿ ಗ್ರೇಡ್ ಸಪರೇಟರ್ ಸಹಿತ ನಾಲ್ಕು ಪಥದ ಬೈಪಾಸ್ ನಿರ್ಮಾಣ ಮಾಡಬೇಕು. 2.ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ 48ನ್ನು 4 ಪಥದ ರಸ್ತೆಗಳಾಗಿ ಮೇಲ್ದರ್ಜೆಗೇರಿಸಿರುವುದರಿಂದ ಆ ಭಾಗದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಆದರೆ, ಸ್ಥಳೀಯ ರಸ್ತೆಗಳ ಜತೆ ಹೆದ್ದಾರಿಗೆ ಸಂಪರ್ಕದ ಕೊರತೆ ಇರುವುದರಿಂದ ಆ ಭಾಗದ ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಹಾಸನ-ನೆಲಮಂಗಲ 4 ಪಥದ ಹೆದ್ದಾರಿ ಜತೆಗೆ ಎರಡು ಪಥದ ಸರ್ವೀಸ್ ರಸ್ತೆಗಳನ್ನು ನಿರ್ಮಿಸುವ ಮೂಲಕ ಹೆದ್ದಾರಿ ಬದಿ ಬರುವ ಗ್ರಾಮೀಣ ಪ್ರದೇಶಗಳ ಅಗತ್ಯತೆ ಪೂರೈಸಬೇಕು. 3.ಕೆ.ಆರ್.ನಗರ-ಹೊಳೆನರಸೀಪುರ-ಹಾಸನ ಮಾರ್ಗವಾಗಿ ಸಾಗುವ ಬಿಳಿಕೆರೆ-ಬೇಲೂರು ರಾಜ್ಯ ಹೆದ್ದಾರಿಯ 47 ಕಿ.ಮೀ.ದೂರವನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ 325 ಕೋಟಿ ರೂ.ಮಂಜೂರು ಮಾಡಿದ್ದು, ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗಿದೆ. ಇದರ ಜತೆಗೆ ಬಿಳಿಕೆರೆ-ಯೆಡೆಗೊಂಡನಹಳ್ಳಿ ಮತ್ತು ಬೇಲೂರು-ಹಾಸನ ಮಧ್ಯೆ 90 ಕಿ.ಮೀ.ರಸ್ತೆಯನ್ನೂ ಇದೇ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಕೃಷಿ, ಕೈಗಾರಿಕೆ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೆ ಅನುಕೂಲ ಮಾಡಿಕೊಡಬೇಕು. ಹಾಸನದಲ್ಲಿ ರೈಲ್ವೆ ಹಳಿ ದಾಟುವ ಸಮಸ್ಯೆ ಬಗೆಹರಿಸಲು 5 ಕಿ.ಮೀ.ಎಲಿವೇಟೆಡ್ ಹೈವೇ ನಿರ್ಮಿಸಬೇಕು. 4.ಚನ್ನರಾಯಪಟ್ಟಣ-ಹೊಳೆನರಸೀಪುರ-ಅರಕಲ ಗೂಡು-ಕೊಡ್ಲಿಪೇಟ್-ಮಡಿಕೇರಿ ರಸ್ತೆಯನ್ನು ರಾಷ್ಟ್ರೀಯ
ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಸಮಗ್ರ ಯೋಜನಾ ವರದಿ ಆಧರಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ 2016ರಲ್ಲಿ ಕೇಂದ್ರ ಸರ್ಕಾರ ಆರಂಭಿಕ ಒಪ್ಪಿಗೆ ನೀಡಿತ್ತು. ಈ ಭಾಗದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ರಸ್ತೆ ಮೇಲ್ದರ್ಜೆಗೇರಿಸುವ ಅನಿವಾರ್ಯತೆ ಇದ್ದು, ಕೂಡಲೇ ಕೇಂದ್ರ ಸರ್ಕಾರ ಈ ಮಾರ್ಗವನ್ನು ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕು.