ಪುಣೆ: ರಾಸಾಯನಿಕ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಸಜೀವ ದಹನವಾಗಿರುವ ದುರಂತ ಘಟನೆ ಪುಣೆ-ಮುಂಬೈ ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಮಂಗಳವಾರ (ಜೂ.13 ರಂದು) ನಡೆದಿದೆ.
ವರದಿಯ ಪ್ರಕಾರ ರಾಸಾಯನಿಕ ಟ್ಯಾಂಕರ್ ಖಂಡಾಲಾ ಘಾಟ್‌ನಲ್ಲಿರುವ ಮೇಲ್ಸೇತುವೆಯಲ್ಲಿ ಪಲ್ಟಿಯಾಗಿದೆ. ಕೆಮಿಕಲ್ ರಸ್ತೆಗೆ ಚೆಲ್ಲಿದ ಪರಿಣಾಮ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸೇತುವೆಯ ಕೆಳಗೂ ಬೆಂಕಿ ತಗುಲಿದೆ. ಘಟನೆಯಲ್ಲಿ ನಾಲ್ವರು ಸಜೀವ ದಹನವಾಗಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Twitter ಮಾಜಿ ಸಿಇಒ ಜಾಕ್ ಡೋರ್ಸಿ ಸಂದರ್ಶನದಲ್ಲಿ ಹೇಳಿದ್ದೇನು? ಬಿಜೆಪಿ ಆಕ್ರೋಶ
ಸೇತುವೆ ಕೆಳಗೆ ಬೈಕ್ ನಲ್ಲಿ ಹೋಗುತ್ತಿದ್ದವರಿಗೂ ಬೆಂಕಿ ತಗುಲಿದ್ದು, 12 ವರ್ಷದ ಬಾಲಕನೊಬ್ಬನಿಗೆ ಬೆಂಕಿ ತಗುಲಿ ಆತ ಮೃತಪಟ್ಟಿದ್ದಾನೆ. ಬೈಕ್ ನಲ್ಲಿದ್ದ ಬಾಲಕನ ಪೋಷಕರಿಗೆ ಗಾಯಗಳಾಗಿವೆ ಎಂದು ಸ್ಥಳೀಯ ಸುದ್ದಿ ತಾಣವೊಂದು ವರದಿ ಮಾಡಿದೆ.
ಅಪಘಾತದಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಪೊಲೀಸರು ಕಾರ್ಯಾಚರಣೆ ಮಾಡಿ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.